Bengaluru, ಫೆಬ್ರವರಿ 11 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಫೆಬ್ರುವರಿ 10ರ ಸಂಚಿಕೆಯಲ್ಲಿ ಭಾವನಾ ಜೊತೆ ಸಿದ್ದೇಗೌಡ್ರು ಆತ್ಮೀಯವಾಗಿ ಮಾತನಾಡಿದ್ದಾರೆ. ಇಬ್ಬರೂ ಪರಸ್ಪರ ಪ್ರೀತಿಯಲ್ಲಿ ಮಾತನಾಡಿಕೊಂಡಿದ್ದು, ಭಾವನಾ ಮನೆಯ ಪರಿಸ್ಥಿತಿ ಹೀಗಾಗಿರುವುದಕ್ಕೆ ಸಿದ್ಧೇಗೌಡ ಬೇಸರ ವ್ಯಕ್ತಪಡಿಸಿದ್ದಾನೆ. ಶೀಘ್ರವೇ ಎಲ್ಲವೂ ಸರಿಯಾಗಲಿದೆ, ನೀವೇನೂ ಚಿಂತಿಸಬೇಡಿ ಮೇಡಂ ಎಂದು ಸಿದ್ದೇಗೌಡ ಭಾವನಾಗೆ ಧೈರ್ಯ ತುಂಬಿದ್ದಾನೆ. ಅವನ ಮಾತು ಕೇಳಿ ಭಾವನಾಗೆ ಕೊಂಚ ಸಮಾಧಾನವಾಗಿದೆ. ಬಳಿಕ ಸಿದ್ದೇಗೌಡ, ಮೇಡಂ ನೀವು ತಪ್ಪು ತಿಳಿಯದಿದ್ದರೆ ನಾನೊಂದು ಮಾತು ಹೇಳುವೆ ಎನ್ನುತ್ತಾನೆ. ಅದಕ್ಕೆ ಭಾವನಾ ಏನು ಎಂದಾಗ, ನಾವಿಬ್ಬರೂ ಜತೆಯಾಗಿ ಹೊರಗಡೆ ಹೋಗಿ ತುಂಬಾ ದಿನಗಳಾದವು, ಹೊರಗಡೆ ಹೋಗಿ ಸುತ್ತಾಡಿ ಬರೋಣ ಎನ್ನುತ್ತಾನೆ. ಭಾವನಾ ಅದಕ್ಕೆ ನಸುನಕ್ಕು ಒಪ್ಪಿಗೆ ಸೂಚಿಸುತ್ತಾಳೆ.

ಇತ್ತ ಮನೆಯನ್ನು ಭಾಗ ಮಾಡಿ, ಕಚ್ಚಾಡಿಕೊಂಡಿರುವ ಹರೀಶ್ ಮತ್ತು ಸಂತೋಷ್, ಮನೆಯ ಹಿಂಭಾಗದಲ್ಲಿ ಮತ್ತೆ ಭೇಟಿಯಾಗುತ್ತಾರೆ. ಇಬ್ಬರೂ ಸ...