ಭಾರತ, ಫೆಬ್ರವರಿ 13 -- ಮಗಳಿಗೆ ಈಗ 19 ವರ್ಷ ಆಗಿ, 20ನೇ ವರ್ಷ ನಡೆಯುತ್ತಿದೆ. ಅವಳ ಹುಟ್ಟಿದ ಹಬ್ಬ, ಹೊಸ ವರ್ಷದ ದಿನ, ವ್ಯಾಲಂಟೇನ್ಸ್ ಡೇ ಇವೆಲ್ಲ ಬಂತೆಂದರೆ ಮುಂಚಿನಷ್ಟು ಸಂಭ್ರಮವಿಲ್ಲ. ಅಸಲಿಗೆ ರಾತ್ರಿ ಹೊತ್ತಲ್ಲಿ ವಾಟ್ಸಾಪ್ ಮೆಸೇಜ್ ಶಬ್ದ ಮನೆಯಲ್ಲಿ ಕೇಳಿದರೆ ಏನೋ ಕೇಡು ಶಂಕಿಸಿದಂತೆ ಆಗುತ್ತದೆ. 'ಇಷ್ಟು ಹೊತ್ತಲ್ಲಿ ಯಾರದು ಮೆಸೇಜ್ ಮಾಡಿದವರು' ಎಂಬುದು ತಲೆಯಲ್ಲಿ ಹುಳ ಹೊಕ್ಕಂತೆ ಆಗುತ್ತದೆ. ಅವಳಿಗೆ ಈಗ ಗೆಳೆಯ-ಗೆಳತಿಯರು ತುಂಬ ಜನ. ಅವರು ನಮ್ಮ ಮನೆಗೂ ನಮ್ಮ ಮಗಳು ಅವರ ಮನೆಗಳಿಗೂ ಹೋಗುವುದು ತುಂಬ ಸಾಮಾನ್ಯ ಸಂಗತಿ.

ಆದರೆ ಅವಳ ಗೆಳೆಯರ ಪೈಕಿ ಯಾರ ಹೆಸರನ್ನು ಬಹಳ ಸಲ ಹೇಳುತ್ತಾಳೆ ಮತ್ತು ಅವರಲ್ಲಿ ಯಾರು ಹೆಚ್ಚಿಗೆ ನಮ್ಮ ಮನೆಗೆ ಬರುತ್ತಾರೆ ಹಾಗೂ ಅವಳು ಸಹ ಯಾರ ಮನೆಗೆ ಹೆಚ್ಚು ಹೋಗುತ್ತಾಳೆ ಎಂಬುದನ್ನು ಬಹಳ ಬುದ್ಧಿವಂತಿಕೆ ಎಂಬಂತೆ ಹೆಂಡತಿಯಿಂದ ವಿಚಾರಿಸಿಕೊಳ್ಳುತ್ತೇನೆ. ಆಗ ಒಂದು ಬಗೆಯಲ್ಲಿ ನಾಚಿಕೆಯೂ ಮತ್ತೊಂದು ಬಗೆಯಲ್ಲಿ ಮಗಳನ್ನು ಅನುಮಾನಿಸುತ್ತಿದ್ದೇನಲ್ಲ ಎಂಬ ಅಪರಾಧಿ ಭಾವವೂ ಕಾಡುತ್ತದೆ. ಅದರ ಜೊತ...