Bangalore, ಏಪ್ರಿಲ್ 8 -- Amruthadhaare serial Yesterday Episode: ಶಕುಂತಲಾದೇವಿ ಮತ್ತು ಲಕ್ಕಿ ಲಕ್ಷ್ಮಿಕಾಂತ್‌ ಬಳಿ ಭೂಮಿಕಾ ಮಾತನಾಡುತ್ತಾಳೆ. ಭಾಗ್ಯಮ್ಮನಿಗೆ ಕರೆಂಟ್‌ ಶಾಕ್‌ ಹೊಡೆದ ಕುರಿತು ಮಾತನಾಡುತ್ತಿದ್ದಾಳೆ. ಈ ಮನೆಗೆ ಯಾರಾದರೂ ಬಂದಿದ್ದಾರೆಯೇ ಎಂದು ಕೇಳುತ್ತಾಳೆ. ಮನೆಗೆ ಬಾಂಬ್‌ ಹಾಕಿದವರೇ ಮಾಡಿರಬಹುದು ಎಂದು ಲಕ್ಷ್ಮಿಕಾಂತ್‌ ಹೇಳುತ್ತಾನೆ. ಒಟ್ಟಾರೆ, ಕಳ್ಳರ ಬಳಿಯೇ ಭೂಮಿಕಾ ಮಾತನಾಡುತ್ತಾಳೆ. "ಇವಳಿಗೆ ಡೌಟ್‌ ಬಂದಿದೆ ಅಷ್ಟೇ, ಆದರೆ, ನಾವು ಎಂದು ಗೊತ್ತಿಲ್ಲ" ಎಂದು ಶಕುಂತಲಾದೇವಿ ಹೇಳುತ್ತಾರೆ. "ಅವಳ ಬಗ್ಗೆ ಹುಷಾರಾಗಿರಬೇಕು" ಎಂದು ಇಬ್ಬರೂ ಮಾತನಾಡುತ್ತಾರೆ.

ಜೈದೇವ್‌ ಮತ್ತು ದಿಯಾ ಮಾತನಾಡುತ್ತಿದ್ದಾರೆ. "ಆಗಿರುವ ಕುರಿತು ಯೋಚನೆ ಮಾಡಬೇಡ" ಎಂದು ಜೈದೇವ್‌ ಹೇಳುತ್ತಾನೆ. "ನನಗೆ ಗೊತ್ತಿರುವವರು ಒಬ್ಬರು ಇದ್ದಾರೆ. ಅವರ ಮನೆಯಲ್ಲಿಯೇ ಮದುವೆಯಾಗೋಣ" ಎಂದು ಜೈದೇವ್‌ ಹೇಳುತ್ತಾನೆ. ಈ ಮೂಲಕ ಭೂಪತಿ ಮನೆಯಲ್ಲೇ ಮದುವೆಯಾಗುವ ಯೋಜನೆ ಆತನದು. "ನನಗೆ ಗೊತ್ತಿಲ್ಲದೆ ವೆಲ್‌ ವಿಷರ್‌ ಯಾರು?" ಎಂದು ಕೇ...