ಭಾರತ, ಫೆಬ್ರವರಿ 27 -- Apaayavide Eccharike Kannada Movie: ಕನ್ನಡದ ಜನಪ್ರಿಯ ಧಾರಾವಾಹಿಗಳ ಕಲಾವಿದರು ನಾಯಕ ಮತ್ತು ನಾಯಕಿಯಾಗಿ ನಟಿಸುತ್ತಿರುವ ಅಪಾಯವಿದೆ ಎಚ್ಚರಿಕೆ ಎಂಬ ಕನ್ನಡ ಸಿನಿಮಾ ನಾಳೆ ಅಂದರೆ ಫೆಬ್ರವರಿ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಅಣ್ಣಯ್ಯ ಧಾರಾವಾಹಿಯ ವಿಕಾಸ್‌ ಉತ್ತಯ್ಯ ನಾಯಕ ನಟನಾಗಿ ಕಾಣಿಸಿದ್ದಾರೆ. ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಪಾತ್ರದಲ್ಲಿ ಕಿರುತೆರೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ರಾಧಾ ಭಗವತಿ ಈ ಸೀರಿಯಲ್‌ನ ಹೀರೋಯಿನ್‌. ಈ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. ಇದು ಈ ವಾರದ ನಿರೀಕ್ಷೆ ಹುಟ್ಟಿಸಿರುವ ಕನ್ನಡ ಸಿನಿಮಾ ಎಂದರೂ ತಪ್ಪಾಗದು. ರಾಘವ್ ಕೊಡಚಾದ್ರಿ ಮತ್ತು ಮಿಥುನ್ ತೀರ್ಥಹಳ್ಳಿ ಕೂಡ ಚಿತ್ರದಲ್ಲಿ ನಟಿಸಿದ್ದಾರೆ.

ಅಪಾಯವಿದೆ ಎಚ್ಚರಿಕೆ ಸಿನಿಮಾವು ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ ಸಿನಿಮಾವಾಗಿದೆ. ಆರಂಭದಲ್ಲಿ ಚಿತ್ರತಂಡ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಿತ್ತು. ಬಳಿಕ ಬ್ಯಾಚುಲರ್‌ ಬದುಕು ಎಂಬ ಹಾಡನ್ನು ಬಿಡುಗಡೆ ಮಾಡಲಾಗ...