Bengaluru, ಮೇ 25 -- ಕೊಚ್ಚಿ: ಲೈಬೀರಿಯನ್ ಧ್ವಜ ಹೊಂದಿರುವ ಸರಕು ಹಡಗು ಎಂಎಎಸ್‌ಸಿ ಎಲ್ಸಾ 3 ಭಾನುವಾರ ಮುಂಜಾನೆ ಕೇರಳದ ಕರಾವಳಿಯಲ್ಲಿ ತೀವ್ರ ಪ್ರವಾಹಕ್ಕೆ ಸಿಲುಕಿ ಮುಳುಗಡೆಯಾಗಿದೆ. ಮೆಡಿಟರೇನಿಯನ್ ಶಿಪ್ಪಿಂಗ್ ಕಂಪನಿ ನಿರ್ವಹಿಸುವ 184 ಮೀಟರ್ ಉದ್ದದ ಹಡಗು ವಿಝಿಂಜಂ ಬಂದರಿನಿಂದ ಕೊಚ್ಚಿಗೆ ತೆರಳುತ್ತಿದ್ದಾಗ ಪ್ರತಿಕೂಲ ಹವಾಮಾನದಿಂದಾಗಿ ಮೇ 24 ರಂದು ತೀವ್ರವಾಗಿ ಮುಳುಗಲು ಆರಂಭವಾಯಿತು. ನಂತರ ಭಾರತೀಯ ಕೋಸ್ಟ್ ಗಾರ್ಡ್ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು ಮತ್ತು ಅದೇ ಮಾರ್ಗವಾಗಿ ಹಾದುಹೋಗುವ ಹಡಗುಗಳು ಕಂಟೇನರ್‌ ಶಿಪ್‌ನಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ರಕ್ಷಿಸಿವೆ.

ಸಿಂಗಾಪುರ ಮೂಲದ ಹಡಗು ಹಾನ್ ಯಿ ಶನಿವಾರ ಒಂಬತ್ತು ಸಿಬ್ಬಂದಿಯನ್ನು ರಕ್ಷಿಸಿದರೆ, ಇತರ 12 ಜನರನ್ನು ಕೋಸ್ಟ್ ಗಾರ್ಡ್ ಹಡಗು ಅನ್ವೇಶ್ ರಕ್ಷಿಸಿದೆ. ಹಡಗಿನಲ್ಲಿದ್ದ ಉಳಿದ ಮೂವರು - ಕ್ಯಾಪ್ಟನ್ (ರಷ್ಯಾದ ಪ್ರಜೆ), ಮುಖ್ಯ ಎಂಜಿನಿಯರ್ ಮತ್ತು ಸಹ ಎಂಜಿನಿಯರ್ ಕಂಪನಿಯ ಪ್ರೋಟೋಕಾಲ್‌ಗೆ ಅನುಗುಣವಾಗಿ ಹಡಗಿನಲ್ಲಿದ್ದರು. ಆದರೆ ನಂತರ ಭಾನುವಾರ ಮುಂಜಾನ...