ಭಾರತ, ಮಾರ್ಚ್ 2 -- Mislay documentary: ವೈದ್ಯಕೀಯ ಲೋಕದ ಅಚ್ಚರಿಗಳನ್ನೇ ಆಧಾರವಾಗಿಟ್ಟುಕೊಂಡು ನಿರ್ದೇಶಕ ಎ. ಪರಮೇಶ್ ಮಿಸ್ಲೆ ಹೆಸರಿನ ಸಾಕ್ಷ್ಯಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿದ್ದ ಕಾಯಿಲೆಯಿಂದ ಡಾಕ್ಟರ್ ಹೇಗೆ ರೋಗಿಯನ್ನು ಪಾರುಮಾಡಿದರು ಎಂಬುದೇ ಈ ಸಾಕ್ಷ್ಯಚಿತ್ರದ ಕಥೆ. ಆಂಧ್ರಪ್ರದೇಶದ ಅನಂತಪುರದ ರೋಗಿಯೊಬ್ಬರು ಕೋವಿಡ್ ಸೋಂಕು ತಗುಲಿ ಅದರಿಂದ ಪಾರಾಗುವುದರೊಳಗೆ ಇನ್ನೊಂದು ಕಾಯಿಲೆಗೆ ತುತ್ತಾಗಿದ್ದರು. ಆ ಕಾಯಿಲೆಯಿಂದ ಆ ವ್ಯಕ್ತಿ ಹೇಗೆ ಬದುಕಿದ? ಎಂಬುದನ್ನು ಮನ ಮಿಡಿಯುವಂತೆ 45 ನಿಮಿಷಗಳಲ್ಲಿ ಕಟ್ಟಿ ಕೊಟ್ಟಿದ್ದಾರೆ ಪರಮೇಶ್‌.

ಮೂಳೆ ರೋಗ ತಜ್ಞರಾದ ಡಾ. ಗೋಪಾಲ ಕೃಷ್ಣ ಅವರು ವೃತ್ತಿಯಲ್ಲಿ ರಿಸ್ಕ್ ತೆಗೆದುಕೊಂಡು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಆಂಧ್ರಪ್ರದೇಶದ ರೋಗಿಗೆ ಪುನರ್ಜನ್ಮ ನೀಡಿದ ಕಥೆಯನ್ನು "ಮಿಸ್ಲೆ" ಎಂಬ ಸಾಕ್ಷ್ಯಚಿತ್ರದ ಮೂಲಕ ಚಿತ್ರೀಕರಿಸಿದೆ. ಸ್ವತಃ ಡಾಕ್ಟರ್ ಆಗಿರುವ ಸುಜಾತ ಎಂಬುವರು ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಪತಿಯ ಸಾಧನೆಯನ್ನು ಸಮಾಜಕ್ಕ...