ಭಾರತ, ಮಾರ್ಚ್ 7 -- ಯಾರದ್ದೇ ಪರ ವಹಿಸುವ ಅಥವಾ ವಿರೋಧಿಸುವ ಮುಂಚೆ ಆಲೋಚನೆ ಮುಖ್ಯ. ಎರಡೂ ಕಡೆ ಭಾವನೆಗಳನ್ನೇ ಬಂಡವಾಳವಾಗಿಸಿಕೊಂಡು ಆಟವಾಡುವವರಿದ್ದಾರೆ. ಇಲ್ಲಿ ಮಾತುಗಳನ್ನು ಮತ್ತು ದ್ವೇಷಪೂರಿತ ಬರಹಗಳನ್ನು ಸಾಕ್ಷಿಯಾಗಿಟ್ಟುಕೊಂಡು ಯಾರನ್ನೂ ಸಮರ್ಥಿಸಲಾಗುವುದಿಲ್ಲ. ಒಂದಂತೂ ನಿಜ, ಹನ್ನೆರೆಡು ವರ್ಷಗಳ‌ ನಂತರವೂ ಸೌಜನ್ಯ ವಿಷಯ ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಿದೆ ಎಂದರೆ ನಿಜವಾಗಿ ಅಲ್ಲಿ ನ್ಯಾಯ ಸಿಕ್ಕಿಲ್ಲ ಅಷ್ಟೇ ಅಲ್ಲ, ಆ ನ್ಯಾಯ ಸಿಗಲೇಬೇಕಿದೆ ಎಂದರ್ಥ.

ಸಮೀರ್ ಎಂಬ‌ ಹುಡುಗನ ಉದ್ದೇಶ ಏನೇ ಇರಲಿ ಅಥವಾ ಹಿನ್ನಲೆ ಏನೇ ಇರಲಿ, ಅವನ ವಿಡಿಯೊ ವೈರಲ್ ಆಗಿ ಸೌಜನ್ಯಳಿಗೆ ನ್ಯಾಯ ಕೊಡಿ‌ಸುವತ್ತ ಹೆಜ್ಜೆ ಇಡುತ್ತಿದೆ. ಮತ್ತೆ ದೇಶವಿಡಿ ಚರ್ಚೆಗೆ ಸೆಳೆಯುತ್ತಿದೆ. ನನಗೆ ನೆನಪಿರುವಂತೆ ಅವನು‌ ಹೇಳಿದ್ದು ಈಗಾಗಲೇ ಬಹಳಷ್ಟು ಜನರ ಬರಹಗಳಲ್ಲಿ ಓದಿ ಆಗಿದೆ. ಕೆಲವರು ಅಲ್ಲಿಯವರೇ. ಅವರಿಗೆ ಗೊತ್ತಿರುವಷ್ಟು ನನಗೆ ಗೊತ್ತಿರಲು ಸಾಧ್ಯವೇ ಇಲ್ಲ.

ಹಾಗಾಗಿ ಈ ಸಮಯದಲ್ಲಿ ಸಮೀರ್ ಪರ ವಹಿಸಲಾರೆ ನಿಜ, ಆದರೆ ವಿರೋಧವೂ ಇಲ್ಲ.

(ಕೆಲವೆ...