Bengaluru, ಫೆಬ್ರವರಿ 1 -- ನೀವು ತೆಂಗಿನಕಾಯಿ, ಕೊಬ್ಬರಿ, ಹುರುಳಿ ಚಟ್ನಿ ಇತ್ಯಾದಿ ಚಟ್ನಿಯ ಖಾದ್ಯಗಳನ್ನು ತಿಂದಿರಬಹುದು ಎಂದಾದರೂ ಒಣ ಸೀಗಡಿ ಚಟ್ನಿಯ ರುಚಿ ಸವಿದಿದ್ದೀರಾ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಬಹಳ ಜನಪ್ರಿಯವಾಗಿರುವ ಖಾದ್ಯವಿದು. ಕುಚ್ಚಲಕ್ಕಿ ಗಂಜಿ ಜೊತೆ ಒಣ ಸೀಗಡಿ ಚಟ್ನಿ ತಿನ್ನುತ್ತಿದ್ದರೆ ಅದರ ಮಜಾವೇ ಬೇರೆ. ಒಣ ಸೀಗಡಿಗೆ ಪುಡಿಮಾಡಿದ ಮಸಾಲೆ, ಒಣಕೊಬ್ಬರಿ ಹಾಕಿ ತಯಾರಿಸಲಾಗುವ ಈ ಖಾದ್ಯದ ರುಚಿ ಮಾತ್ರ ಅದ್ಭುತ. ಸಮುದ್ರಾಹಾರ ಪ್ರಿಯರಿಗಂತೂ ಈ ಚಟ್ನಿ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ. ಹಾಗಿದ್ದರೆ ಒಣ ಸೀಗಡಿ ಚಟ್ನಿ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು: ಒಣ ಸೀಗಡಿ- 2 ಕಪ್, ಬ್ಯಾಡಗಿ ಮೆಣಸು- 35, ಕೊತ್ತಂಬರಿ ಬೀಜ- 3 ಚಮಚ, ಜೀರಿಗೆ- 1 ಚಮಚ, ಅರಿಶಿನ- ಅರ್ಧ ಚಮಚ, ಹುಳಿ- 1 ಸಣ್ಣ ನಿಂಬೆ ಗಾತ್ರ, ಉಪ್ಪು- ರುಚಿಗೆ ತಕ್ಕಷ್ಟು, ಬೆಳ್ಳುಳ್ಳಿ ಎಸಳು- 12, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು, ಒಣಕೊಬ್ಬರಿ- 2 ಕಪ್.

ಇದನ್ನೂ ಓದಿ: ಚೆಟ್ಟಿನಾಡ್ ಶೈಲಿಯಲ್ಲ...