ಭಾರತ, ಮಾರ್ಚ್ 5 -- ಚಿಕನ್ ಖಾದ್ಯಗಳು ಮಾಂಸಾಹಾರ ಪ್ರಿಯರಿಗೆ ಬಹಳ ಅಚ್ಚುಮೆಚ್ಚು ಎಂದರೆ ತಪ್ಪಿಲ್ಲ. ಚಿಕನ್‌ನಿಂದ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಸರಳವಾಗಿ ಚಿಕನ್ ಖಾದ್ಯ ತಯಾರಿಸಬೇಕೆಂದರೆ ಈ ರೀತಿ ಚಿಕನ್ ಮಸಾಲೆ ಮಾಡಿ ನೋಡಿ. ಇದು ರೋಟಿ, ಚಪಾತಿ, ಅನ್ನದೊಂದಿಗೂ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇಲ್ಲಿ ತಿಳಿಸಿರುವಂತೆ ಪಾಕವಿಧಾನವನ್ನು ಪ್ರಯತ್ನಿಸಿ ನೋಡಿ, ಖಂಡಿತ ಇಷ್ಟಪಡುವಿರಿ. ಚಿಕನ್ ಮಸಾಲೆ ಖಾದ್ಯ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥಗಳು: 750 ಗ್ರಾಂ ಕೋಳಿ ಮಾಂಸ, 2 ಕಪ್ ಕತ್ತರಿಸಿದ ಈರುಳ್ಳಿ, ಉಪ್ಪು ಅಗತ್ಯಕ್ಕೆ ತಕ್ಕಷ್ಟು, 2 ಇಂಚು ದಾಲ್ಚಿನ್ನಿ, 2 ಹಸಿರು ಏಲಕ್ಕಿ, 1 ಚಮಚ ಶುಂಠಿ ಪೇಸ್ಟ್, 2 ಚಮಚ ಕೊತ್ತಂಬರಿ ಪುಡಿ, 1 ಕಪ್ ನೀರು, 2 ಚಮಚ ಜೀರಿಗೆ ಪುಡಿ, 1 ಚಮಚ ಗರಂ ಮಸಾಲೆ ಪುಡಿ, 1 ಚಮಚ ತುಪ್ಪ, 4 ಚಮಚ ಸಾಸಿವೆ ಎಣ್ಣೆ, 1/2 ಕಪ್ ಸಣ್ಣಗೆ ಹೆಚ್ಚಿದ ಟೊಮೆಟೊ, 3 ಚಮಚದಷ್ಟು ಕತ್ತರಿಸಿದ ಕೊತ್ತಂಬರಿ ಸೊಪ್ಪು, 2 ಬಿರಿಯಾನಿ ಎಲೆ, 1 ಕಪ್ಪು ಏಲಕ್ಕಿ, 2 ...