ಭಾರತ, ಮಾರ್ಚ್ 22 -- ಬೆಂಗಳೂರು: ಬೆಂಗಳೂರು ಗ್ರಾಮಾಂತರ ವ್ಯಾಪ್ತಿಗೆ ಬರುವ ಆನೇಕಲ್‌ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಅನಾಹುತವೊಂದು ನಡೆದಿದೆ. ಜಾತ್ರೆಗೆ ಬರುತ್ತಿದ್ದ ರಾಯಸಂದ್ರ ಗ್ರಾಮದ ತೇರು ಉರುಳಿ ಬಿದಿದ್ದೆ. ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.

ತೇರು ಬೀಳುತ್ತಿರುವ ದೃಶ್ಯ ಸೆರೆಯಾಗಿದ್ದು, ವಿಡಿಯೊ ವೈರಲ್ ಆಗುತ್ತಿದೆ. ಜಾತ್ರೆಗೆ ತೇರು ಎಳೆದು ತರುವ ವೇಳೆ ಈ ಅವಗಢ ಸಂಭವಿಸಿದೆ. 150 ಅಡಿ ಎತ್ತರದ ತೇರು ಇದಾಗಿದೆ. ತೇರಿನ ಅಡಿಗೆ ಸಿಲುಕಿದೆ ವ್ಯಕ್ತಿ ಸ್ಥಳದಲ್ಲೇ ಮೃತ್ತಪಟ್ಟಿದ್ದರೆ, ಗಂಭೀರ ಗಾಯವಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Published by HT Digital Content Services with permission from HT Kannada....