ಭಾರತ, ಜನವರಿ 27 -- ಕೃತಕ ಬುದ್ಧಿಮತ್ತೆ ಕಂಪನಿಯಾದ ಓಪನ್‌ಎಐ (OpenAI) ವಿರುದ್ಧ ಸುದ್ದಿಸಂಸ್ಥೆ ಎಎನ್‌ಐ ಸಲ್ಲಿಸಿದ ಹಕ್ಕುಸ್ವಾಮ್ಯ ಮೊಕದ್ದಮೆಗೆ (copyright lawsuit) ಸಂಬಂಧಿಸಿದಂತೆ, ಹಿಂದೂಸ್ತಾನ್ ಟೈಮ್ಸ್‌ನ ಡಿಜಿಟಲ್ ಅಂಗವಾದ ಎಚ್‌ಟಿ ಡಿಜಿಟಲ್ ಸ್ಟ್ರೀಮ್ಸ್ ಸೇರಿದಂತೆ ವಿವಿಧ ಮಾಧ್ಯಮ ಸಂಸ್ಥೆಗಳು ಸೋಮವಾರ (ಜನವರಿ 27) ದೆಹಲಿ ಹೈಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಿವೆ. ಈ ಕಾನೂನು ಪ್ರಕರಣದಲ್ಲಿ ಎಚ್‌ಟಿ ಡಿಜಿಟಲ್ ಸ್ಟ್ರೀಮ್ಸ್ ಜತೆಗೆ ಐಇ ಆನ್‌ಲೈನ್ ಮೀಡಿಯಾ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (Express Group), ಎನ್‌ಡಿಟಿವಿ ಕನ್ವರ್ಜೆನ್ಸ್ ಮತ್ತು ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್ ಅಸೋಸಿಯೇಷನ್ (DNPA) ಕೂಡಾ ಮೂರನೇ ವ್ಯಕ್ತಿ ಅಥವಾ ಥರ್ಡ್‌ ಪಾರ್ಟಿಯಾಗಿ ಸೇರಿಕೊಂಡಿದೆ. ಟೈಮ್ಸ್ ಗ್ರೂಪ್ ಈ ಅರ್ಜಿಯ ಭಾಗವಾಗಿಲ್ಲ.

ಎಎನ್ಐ ಪ್ರಕರಣದ ಮುಂದಿನ ವಿಚಾರಣೆಗೆ ಒಂದು ದಿನ ಮುಂಚಿತವಾಗಿ ಈ ಮಧ್ಯಂತರ ಅರ್ಜಿಯನ್ನು ಸಲ್ಲಿಸಲಾಗಿದೆ. ಓಪನ್ಎಐ ಥರದ ಕಂಪನಿಗಳು ತನ್ನ ವೆಬ್‌ಸೈಟ್‌ಗಳು ಮಾತ್ರವಲ್ಲದೆ ಇತರ ಪ್ಲಾಟ್‌...