ಭಾರತ, ಫೆಬ್ರವರಿ 25 -- ಬೆಂಗಳೂರು: ರಾಜ್ಯದ ಏಕೈಕ ಜಾನಪದ ಕಲೆಗಳ ಸಾಂಸ್ಕೃತಿಕ ಕೇಂದ್ರ ಹಾಗೂ ವಸ್ತು ಸಂಗ್ರಹಾಲಯವಿರುವ ರಾಮನಗರದ ಜಾನಪದ ಲೋಕಕ್ಕೆ ರಾಜ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ 2 ಕೋಟಿ ರೂ. ವಿಶೇಷ ಅನುದಾನ ಘೋಷಿಸಿತ್ತು. ಅದರಲ್ಲಿ ಕೇವಲ 1 ಕೋಟಿ ರೂ. ಮಾತ್ರ ಬಿಡುಗಡೆಯಾಗಿದ್ದು, ಜಾನಪದ ತಜ್ಞರು ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ. ಮತ್ತೊಂದು ಬಜೆಟ್‌ಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಬಾಕಿ 1 ಕೋಟಿ ರೂ.ಜಾನಪದ ಲೋಕವನ್ನು ತಲುಪಿಲ್ಲ. ಮತ್ತೊಂದು ಬಜೆಟ್‌ ಮಂಡನೆಗೂ ಮುಂಚಿತವಾಗಿ ಅನುದಾನ ಬಿಡುಗಡೆಯಾಗದಿದ್ದರೆ ಕಳೆದ ವರ್ಷದ ಅನುದಾನ ಕೈ ತಪ್ಪುವ ಆತಂಕ ಕರ್ನಾಟಕ ಜಾನಪದ ಪರಿಷತ್‌ ಅನ್ನು ಕಾಡುತ್ತಿದೆ.

ಬಾಕಿ ಅನುದಾನ ಬಿಡುಗಡೆ ಮಾಡುವಂತೆ ಜಾನಪದ ಪರಿಷತ್ತಿನ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಅಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ನಿರಂತರವಾಗಿ ಪತ್ರ ವ್ಯವಹಾರ ನಡೆಸುವುದರ ಜತೆಗೆ ಕಚೇರಿಗೆ ನಿರಂತರವಾಗಿ ಎಡತಾಕುತ್ತಿದ್ದರೂ ಅನುದಾನ ಮಾತ್ರ ಮರೀಚಿಕೆಯಾಗಿ ಉಳಿದಿದೆ.

ಕರ್ನಾಟಕ ಜಾನಪದ ಪರಿಷತ್...