Bengaluru, ಫೆಬ್ರವರಿ 25 -- Actress Sudharani: ಸ್ಯಾಂಡಲ್‌ವುಡ್‌ ಕಂಡ ಮೇರು ನಟ ಅನಂತ್‌ನಾಗ್‌ ಅವರಿಗೆ ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಅತ್ಯುತ್ತಮ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಹಿರಿಯ ನಟನ ಮನೆಗೆ ನಟಿ ಸುಧಾರಾಣಿ ಮತ್ತು ಮಾಳವಿಕಾ ಅವಿನಾಶ್‌ ಭೇಟಿ ನೀಡಿ, ಒಂದಷ್ಟು ಗಂಟೆಗಳ ಕಾಲ ಹರಟಿದ್ದಾರೆ. ಹಳೇ ದಿನಗಳನ್ನು ಮೆಲುಕು ಹಾಕಿದ್ದಾರೆ. ಆ ನೆನಪುಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಅಕ್ಷರಕ್ಕೆ ಇಳಿಸಿದ್ದಾರೆ ಸುಧಾರಾಣಿ. ಇಲ್ಲಿದೆ ಅವರ ಬರಹ.

1981ರಲ್ಲಿ, ಅನುಪಮಾ ಸಿನಿಮಾದಲ್ಲಿ ಅನಂತ್ ನಾಗ್ Sir ಜೊತೆ ಬಾಲನಟಿಯಾಗಿ ತೆರೆಹಂಚಿಕೊಂಡಾಗಿನಿಂದ ಇಲ್ಲಿಯವರೆಗೂ ಅವರೊಡನೆ ಒಳ್ಳೇ ಒಡನಾಟ ಇದೆ. ಅವರನ್ನ ಭೇಟಿ ಮಾಡೋಕೆ ಕಾರಣವೇ ಬೇಕಿಲ್ಲ, ಪ್ರತಿ ಸಾರಿ ಭೇಟಿ ಮಾಡಿ ಮಾತನಾಡಿದಾಗ it'll be a Different Experience. ಕಲಿಯೋದು ಬಹಳ ಇರತ್ತೆ, ಸದಾ ನೆನಪಲ್ಲಿ ಉಳಿಯುವಂಥ ಕ್ಷಣಗಳಾಗಿರತ್ತೆ.

ಇತ್ತೀಚೆಗೆ ಅನಂತ್ ನಾಗ್ Sir ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದಿ...