ಭಾರತ, ಮಾರ್ಚ್ 20 -- ಟೀಮ್‌ ಇಂಡಿಯಾ ಸ್ಟಾರ್‌ ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಇದೀಗ ಕಾನೂನುಬದ್ಧವಾಗಿ ದೂರವಾಗಿದ್ದಾರೆ. ಇಬ್ಬರ ವಿಚ್ಛೇದನಕ್ಕೆ ನ್ಯಾಯಾಲಯ ಅಧಿಕೃತ ಮುದ್ರೆಯೊತ್ತಿದೆ. ಅಂದರೆ ಇಬ್ಬರೂ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ ಎಂದು ವಕೀಲರು ದೃಢಪಡಿಸಿದ್ದಾರೆ. ಇದರೊಂದಿಗೆ ಸ್ಟಾರ್‌ ದಂಪತಿ ಇಂದಿನಿಂದ ಬೇರೆ ಬೇರೆ ಆಗಲಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ಸ್ಟಾರ್‌ ಜೋಡಿಯ ವಿಚ್ಛೇದನ ವಿಚಾರ ಸುದ್ದಿಯಲ್ಲಿವೆ. ಇಂದು (ಮಾ.20) ಮುಂಬೈನ ಬಾಂದ್ರಾದಲ್ಲಿರುವ ಕೌಟುಂಬಿಕ ನ್ಯಾಯಾಲಯದಿಂದ ಇಬ್ಬರೂ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ.

(ಸುದ್ದಿ ಅಪ್ಡೇಟ್‌ ಆಗಲಿದೆ)

Published by HT Digital Content Services with permission from HT Kannada....