ಭಾರತ, ಏಪ್ರಿಲ್ 13 -- ನಟಿ ಸುಷ್ಮಾ ರಾವ್ ಸದ್ಯ ಕನ್ನಡ ಕಿರುತೆರೆಯ ಭಾಗ್ಯಕ್ಕನಾಗಿ ಎಲ್ಲರ ಮನ ಗೆಲ್ಲುತ್ತಿದ್ದಾರೆ. ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮೀ ಧಾರಾವಾಹಿಯ ಭಾಗ್ಯಳ ಪಾತ್ರಕ್ಕೆ ಜೀವ ತುಂಬುತ್ತಿರುವ ಸುಷ್ಮಾ ರಾವ್‌ ಗಂಡನಿಂದ ನೊಂದ ಹೆಣ್ಣುಮಕ್ಕಳ ಪ್ರತಿನಿಧಿಯಾಗಿ ತೆರೆ ಮೇಲೆ ಕಾಣಿಸಿದ್ದಾರೆ. ಗಂಡ ಮೋಸ ಮಾಡಿದರೂ ಎಷ್ಟೇ ಕಷ್ಟ ಕೊಟ್ರು ಜಗ್ಗದೇ ಮಕ್ಕಳು, ಅತ್ತೆ-ಮಾವನ ಜೊತೆ ನಿಂತು ಬದುಕನ್ನು ದಿಟ್ಟವಾಗಿ ಎದುರಿಸುವ ಭಾಗ್ಯ ಹಲವು ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ.

ಇಂತಿಪ್ಪ ಭಾಗ್ಯಕ್ಕ ಇದೀಗ ಇದ್ದಕ್ಕಿದ್ದಂತೆ ಮಕ್ಕಳು ಹಾಗೂ ಅತ್ತೆ ಮಾವನನ್ನು ಬಿಟ್ಟು ಹೊರಟಿದ್ದಾರೆ. ಎಲ್ಲಿಗೆ ಹೊರಟಿದ್ದಾರೆ ಅಂತ ಕೇಳಿದ್ರೆ ಖಂಡಿತ ನಿಮಗೆ ಆಶ್ಚರ್ಯವಾಗುತ್ತೆ. ಹೌದು ಭಾಗ್ಯ ಅಲಿಯಾಸ್ ಸುಷ್ಮಾ ರಾವ್ ಹೊರಟಿರುವುದು ಮೌಂಟ್ ಎವರೆಸ್ಟ್ ಕಡೆಗೆ, ಭಾಗ್ಯಕ್ಕಂಗೆ ಅಲ್ಲೇನು ಕೆಲಸ ಅನ್ಬೇಡಿ. ಮೌಂಟ್ ಎವರೆಸ್ಟ್ ಹತ್ತಬೇಕು ಅನ್ನೋದು ಸುಷ್ಮಾ ರಾವ್ ಅವರ ಬಹುದಿನಗಳ ಕನಸು. ಹಾಗಂತ ಈ ಬಾರಿ ಅವರು ಹೋಗ್ತಾ ಇರೋದು ಮೌಂಟ್ ಎವರೆಸ್ಟ್ ಹತ್ತ...