ಭಾರತ, ಏಪ್ರಿಲ್ 17 -- Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 16ರ ಸಂಚಿಕೆಯಲ್ಲಿ ಅತ್ತೆಗೆ ಹುಷಾರಿಲ್ಲದ ಕಾರಣ ಹನಿಮೂನ್‌ಗೆ ಹೋಗೋದಿಲ್ಲ ಎಂದು ನಿರ್ಧಾರ ಮಾಡಿದ್ಲು ಶ್ರಾವಣಿ. ಸುಬ್ಬು 'ಮೇಡಂ, ಲಲಿತಾದೇವಿ ಅಮ್ಮೋರಿಗೆ ಏನು ಹೇಳೋದು' ಅಂತ ಆತಂಕ ವ್ಯಕ್ತಪಡಿಸಿದ್ರೂ 'ಸುಬ್ಬು ಅಜ್ಜಿಗೆ ನಾನು ಹೇಳ್ತೀನಿ. ನೀನು ತಲೆ ಕೆಡಿಸಿಕೊಳ್ಳಬೇಡ. ಅತ್ತೆಗೆ ಇಷ್ಟೊಂದು ಹುಷಾರಿಲ್ಲದೇ ಇರುವಾಗ ನಾವು ಹನಿಮೂನ್‌ಗೆ ಹೋಗೋದು ಬೇಕಾ, ನೀನು ಹೋಗಿ ಡಾಕ್ಟರ್ ಕರೆದುಕೊಂಡು ಬಾ' ಎಂದು ಗಂಡನಿಗೆ ಅಭಯ ನೀಡುತ್ತಾಳೆ.

ಜ್ವರದ ನಡುವೆಯೂ ತನ್ನಿಂದ ಹನಿಮೂನ್‌ ಕ್ಯಾನ್ಸಲ್ ಆಗೋದು ಬೇಡ ಎಂದುಕೊಳ್ಳುವ ವಿಶಾಲಾಕ್ಷಿ, ನಾನು ಆರಾಮಾಗ್ತೀನಿ ನೀವು ಹೋಗಿ ಬನ್ನಿ ಎಂದು ಹೇಳುತ್ತಾಳೆ. ಪದ್ಮನಾಭ ಕೂಡ ಅವಳಿಗೆ ಧ್ವನಿಗೂಡಿಸಿ, ಹೌದು ಶ್ರಾವಣಿಯಮ್ಮ, ಹೋಗಿ ಬನ್ನಿ ಇಲ್ಲಿ ನಾನು ವಿಶಾಲುವನ್ನು ನೋಡಿಕೊಳ್ತೀನಿ ಎಂದು ಹೇಳುತ್ತಾರೆ. ಆದರೆ ಅದಕ್ಕೂ ಶ್ರಾವಣಿ ಒಪ್ಪುವುದಿಲ್ಲ. ತಾನೇ ಮುಂದೆ ನಿಂತು ಅತ್ತೆಯನ್ನು ನೋಡಿಕೊ...