Bengaluru, ಮಾರ್ಚ್ 26 -- ನೈಸರ್ಗಿಕವಾಗಿ ಸೇವಿಸುವ ಆಹಾರಗಳಿಗೂ, ಅತೀವವಾಗಿ ಸಂಸ್ಕರಿಸಿದ ಆಹಾರಗಳನ್ನು ಸೇವಿಸುವುದಕ್ಕೂ ನಾನಾ ರೀತಿಯ ವ್ಯತ್ಯಾಸಗಳನ್ನು ಕಾಣಬಹುದು. ಸಂಸ್ಕರಿಸಿದ ಅಥವಾ ಅಲ್ಟ್ರಾ ಪ್ರೊಸೆಸ್ಡ್​​ ಆಹಾರ ಸೇವನೆಯಿಂದ ಹೃದಯ ರಕ್ತನಾಳದ ಸಮಸ್ಯೆ ಉದ್ಭವಿಸಿ ಸಾವಿನ ಅಪಾಯ ಹೆಚ್ಚಾಗುವ ಸಾಧ್ಯತೆಯಿದೆ.

ಈ ಕುರಿತು ಹೆಚ್.ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ವೈದ್ಯಕೀಯ ಆಂಕೊಲಾಜಿ ಸಲಹೆಗಾರರಾದ ಡಾ. ಪ್ರೀತಮ್ ಕಟಾರಿಯಾ ಅವರು ಮಾಹಿತಿ ನೀಡಿದ್ದಾರೆ. ಬೇಯಿಸಿದ ಪ್ಯಾಕೇಜ್ ಆಹಾರ ಮತ್ತು ಸ್ನಾಕ್ಸ್‌, ಪಾನೀಯಗಳು, ಸಕ್ಕರೆ ಸೆರೆಲ್ಸ್​​, ರೆಡಿ ಟೂ ಈಟ್​​ ಅಥವಾ ಶಾಖಾ ಉತ್ಪನ್ನಗಳು ಅನೇಕ ಬಾರಿ ಭಾರಿ ಪ್ರಮಾಣದಲ್ಲಿ ಕೈಗಾರಿಕಾ ಪ್ರಕ್ರಿಯೆಗೆ ಒಳಗಾಗುತ್ತವೆ. ಈ ಸಂದರ್ಭದಲ್ಲಿ ಇವುಗಳಿಗೆ ಬಣ್ಣ, ಎಮಲ್ಸಿಫೈಯರ್​, ಸುವಾಸನೆ ಮತ್ತಿತರ ಅಂಶಗಳನ್ನು ಸೇರಿಸಲಾಗುತ್ತದೆ. ಈ ಉತ್ಪನ್ನಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಸಕ್ಕರೆ, ಕೊಬ್ಬು ಅಥವಾ ಉಪ್ಪು ಇರುತ್ತದೆ. ಇವು ಕಡಿಮೆ ಪ್ರಮಾಣದಲ್ಲಿ ವಿಟಮಿನ್​ ಮತ್ತು ಫೈಬರ್​ ಒಳಗೊಂಡಿರುತ್ತ...