ಭಾರತ, ಏಪ್ರಿಲ್ 28 -- ವಿಶ್ವದಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ದೇಶ ಭಾರತ. ಅತಿ ಹೆಚ್ಚು ಮಲಿನವಾಗಿರುವ ನಗರಗಳ ಸಂಖ್ಯೆ ಕೂಡಾ ಭಾರತದಲ್ಲಿ ಹೆಚ್ಚಿದೆ. ವಿಶ್ವದ ಅತ್ಯಂತ ಕಲುಷಿತ 20 ನಗರಗಳ ಪೈಕಿ 13 ನಗರಗಳು ಭಾರತದಲ್ಲಿಯೇ ಇವೆ ಎಂಬುದು ಆತಂಕಕಾರಿ ಅಂಶ. ಇತ್ತೀಚೆಗೆ ಪ್ರಕಟವಾದ ಹೊಸ ವರದಿಯ ಪ್ರಕಾರ, ಅಸ್ಸಾಂನ ಬೈರ್ನಿಹತ್ ನಗರವು ವಿಶ್ವದ ಅತ್ಯಂತ ಮಲಿನವಾದ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದೇ ವೇಳೆ ಭಾರತದ ರಾಜಧಾನಿ ಹಾಗೂ ಅತಿ ಹೆಚ್ಚು ಜನಸಂಖ್ಯೆ ಇರುವ ನಗರವಾದ ದೆಹಲಿ ವಿಶ್ವದ ಅತಿ ಹೆಚ್ಚು ಕಲುಷಿತವಾಗಿರುವ ರಾಜಧಾನಿಯಾಗಿದೆ.

ಸ್ವಿಸ್ ವಾಯು ಗುಣಮಟ್ಟದ ತಂತ್ರಜ್ಞಾನ ಕಂಪನಿ ಐಕ್ಯೂಏರ್‌ನ (IQAir) ವಿಶ್ವ ವಾಯು ಗುಣಮಟ್ಟ ವರದಿ 2024ರ ಪ್ರಕಾರ, ದೆಹಲಿಯು ವಿಶ್ವದಲ್ಲೇ ಅತ್ಯಂತ ಕಲುಷಿತ ರಾಜಧಾನಿಯಾಗಿ ಮುಂದುವರೆದಿದೆ. ಹಲವು ವರ್ಷಗಳಿಂದ ದೆಹಲಿಯು ಈ ಹಣೆಪಟ್ಟಿ ಹೊತ್ತಿದೆ. ಇದೇ ವೇಳೆ 2023ರಲ್ಲಿ ವಿಶ್ವದ ಮೂರನೇ‌ ಅತ್ಯಂತ ಮಲಿನವಾದ ದೇಶ ಎನಿಸಿಕೊಂಡಿದ್ದ ಭಾರತವು, 2024ರ ವೇಳೆಗೆ ತುಸು ಸುಧಾರಿಸಿಕೊಂಡಿದ...