ಭಾರತ, ಫೆಬ್ರವರಿ 20 -- ಪ್ರಶ್ನೆ: ನಾನು 35 ವರ್ಷದ ಮಹಿಳೆ, ಗಂಡ ಮತ್ತು ಒಬ್ಬ ಮಗನಿದ್ದಾನೆ. ನನಗೆ ಒಂದು ಸಮಸ್ಯೆ ಕಾಡುತ್ತಿದೆ. ನಾನು ಆಗಿ ಹೋದ ಮತ್ತು ಆಗ ಬಹುದಾದ ಪ್ರತಿಯೊಂದು ಸನ್ನಿವೇಶಗಳ ಕುರಿತು ಬಹಳ ಯೋಚನೆ ಮಾಡುತ್ತೇನೆ. ಎಷ್ಟು ಬೇಡವೆಂದರೂ ಕೂಡ ಯೋಚನೆಗಳು ಬರುತ್ತಲೇ ಇರುತ್ತವೆ. ಮನೆಯವರು ಕೂಡ ನಾನು ಅನಗತ್ಯವಾಗಿ ಯೋಚಿಸುತ್ತೇನೆಂದು ಬಯ್ಯುತ್ತಾರೆ. ನನಗೆ ಇದರಿಂದ ಸಿಟ್ಟು ಮತ್ತು ಮನಸ್ಸಿಗೆ ಕಿರಿಕಿರಿ ಅನ್ನಿಸುತ್ತದೆ ಮತ್ತು ಮನಸ್ಸಿಟ್ಟು ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ಏನು ಮಾಡಬೇಕೆಂದು ತೋಚುತ್ತಿಲ್ಲ. ಇದರಿಂದ ನನಗೆ ದೊಡ್ಡ ಸಮಸ್ಯೆಯೇನಾದ್ರೂ ಆಗಬಹುದೇ ಮತ್ತು ಹೇಗೆ ಬಗೆಹರಿಸಿಕೊಳ್ಳಬಹುದೆಂದು ತಿಳಿಸಿಕೊಡಿ.

ಉತ್ತರ: ಬಹುಶಃ ನೀವು ನಿರಂತರವಾಗಿ ಅತಿಯಾದ ಯೋಚನೆ (ಓವರ್ ಥಿಂಕಿಂಗ್) ಮಾಡುತ್ತಿದ್ದೀರಿ. ನಿರಂತರವಾಗಿ ಈ ಆಲೋಚನೆಗಳು ನಿಮ್ಮನ್ನು ಆವರಿಸಿಕೊಂಡರೆ ನಿಮ್ಮ ಮನಃಶಾಂತಿ ಮತ್ತು ಸ್ಥಿರತೆಯನ್ನು ನಿಭಾಯಿಸಿಕೊಂಡು ಹೋಗುವುದು ಕಷ್ಟವಾಗಬಹುದು. ಈ ಸಮಸ್ಯೆಯನ್ನು ಈ ರೀತಿ ಬಗೆಹರಿಸಿಕೊಳ್ಳಬಹುದು.

ಓವರ್ ಥ...