ಭಾರತ, ಮೇ 14 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಮಂಗಳವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 197ನೇ ಎಪಿಸೋಡ್‌ ಕಥೆ ಹೀಗಿದೆ. ತಾಯಿ ಬಗ್ಗೆ ಕೇಳಿದ ಪಾರ್ವತಿ ಮೇಲೆ ಶಿವು ಸಿಟ್ಟಾಗುತ್ತಾನೆ. ನಂತರ ತನ್ನ ತಪ್ಪಿನ ಅರಿವಾಗಿ ಅವಳ ಬಳಿ ಕ್ಷಮೆ ಕೇಳುತ್ತಾನೆ. ಪಾರ್ವತಿ ಬೇಡಿಕೆಯ ಮೇರೆಗೆ ಅವಳನ್ನು ಪುಟ್ಟ ಮಕ್ಕಳಂತೆ ಅಂಗಡಿವರೆಗೂ ಕೂಸುಮರಿ ಹೊತ್ತು ಹೋಗುತ್ತಾನೆ. ಇವರಿಬ್ಬರ ಪ್ರೀತಿ ಕಂಡು ಗೊರಕೆ ಖುಷಿಯಾಗುತ್ತಾನೆ. ಮತ್ತೊಂದೆಡೆ ವೀರಭದ್ರ, ಮಗಳು ಪಾರ್ವತಿ ಡಾಕ್ಟರ್‌ ಆಗಬಾರದು ಎಂಬ ಕಾರಣಕ್ಕೆ ಅವಳ ಮೆಡಿಕಲ್‌ ಸರ್ಟಿಫಿಕೇಟ್‌ ಹರಿಯುತ್ತಾನೆ.

ಅಂಗಡಿ ಮುಚ್ಚಿ ಪಾರು, ಶಿವು ಮನೆಗೆ ಬರುತ್ತಾರೆ. ಗೋಡಂಬಿಗೆ ಮೆಡಿಸನ್‌ ಕೊಟ್ಟು ಪಾರ್ವತಿ ರೂಮ್‌ ಒಳಗೆ ಬರುತ್ತಾಳೆ. ಮನೆಗೆ ಹೋದ ಕೂಡಲೇ ನನ್ನನ್ನು ಮುದ್ದಾಡುತ್ತೇನೆ ಎಂದು ಹೇಳಿದ್ದೆ ತಾನೇ, ಈಗ ಮುದ್ದಾಡು ಎಂದು ಶಿವು ಬಳಿ ಹೇಳುತ್ತಾಳೆ. ಶಿವು ನಾಚಿಕೆಯಿಂದಲೇ ಮಗುವನ್ನು ಮುದ್ದಾಡುವಂತೆ ಅವಳ ಕೆನ್ನೆ ಹಿಡಿದು ಮುದ್ದಾಡಿ ಈಗ ಖುಷಿ ಆಯ್ತಾ ಎಂದು ಕ...