ಭಾರತ, ಮಾರ್ಚ್ 20 -- ಅಣ್ಣಯ್ಯ ಧಾರಾವಾಹಿಯಲ್ಲಿ ಒಟ್ಟಾಗಿ ಅಭಿನಯಿಸುತ್ತಿರುವ ವಿಕಾಶ್‌ ಉತ್ತಯ್ಯ ಹಾಗೂ ನಿಶಾ ರವಿಕೃಷ್ಣ ನಿಜ ಜೀವನದಲ್ಲೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರಾ? ಎಂಬ ಅನುಮಾನ ಆರಂಭವಾಗಿದೆ. ಸಾಕಷ್ಟು ಬಾರಿ ಈ ಪ್ರಶ್ನೆಯನ್ನು ಅವರಿಬ್ಬರಿಗೆ ಕೇಳಲಾಗಿದೆ. ಆದರೆ, ಯಾವುದೇ ಸ್ಪಷ್ಟ ಉತ್ತರ ಬಂದಿಲ್ಲ. ಆದರೂ, ಅವರಿಬ್ಬರು ಪ್ರೀತಿಸುತ್ತಿರಬಹುದು ಎಂಬ ಕೆಲ ಸೂಚನೆಗಳು ಲಭ್ಯವಾಗಿದೆ. ವಿಕಾಶ್‌ ಅವರ ಸಿನಿಮಾ ಬಿಡುಗಡೆಯಾದಾಗ ನಿಶಾ ನೀಡಿದ ಪ್ರತಿಕ್ರಿಯೆ ಹಾಗೂ ಚಿತ್ರಮಂದಿರದಲ್ಲಿ ಅವರಿಬ್ಬರು ಕೈ ಕೈ ಹಿಡಿದುಕೊಂಡ ವಿಡಿಯೋ ಒಂದು ವೈರಲ್ ಆಗಿತ್ತು. ಅದಾದ ನಂತರ ರಿಯಾಲಿಟಿ ಶೋದಲ್ಲಿ ಪ್ರಶ್ನೆ ಮಾಡಲಾಗಿತ್ತು.

ಒಮ್ಮೆ ಕಲರ್ಸ್ ಕನ್ನಡ ನಡೆಸಿದ ಕಾರ್ಯಕ್ರಮವೊಂದರಲ್ಲ ನಿಶಾ ಅವರ ತಾಯಿಗೆ ಕಾಲ್ ಮಾಡಿ "ನಾನು ಒಬ್ಬರನ್ನು ಪ್ರೀತಿಸ್ತಾ ಇದ್ದೀನಿ" ಎಂದು ಹೇಳುವ ಸವಾಲು ನೀಡಲಾಗಿತ್ತು ಆಗ ನಿಶಾ ಕಾಲ್ ಮಾಡಿದಾಗ ಅವರ ತಾಯಿ ಈ ಮಾತಿಗೆ ಆಶ್ಚರ್ಯ ವ್ಯಕ್ತಪಡಿಸಲಿಲ್ಲ. ಹೊರತಾಗಿ ಗಾಬರಿಯೂ ಆಗಿರಲಿಲ್ಲ. ಇದೇನು ಹೊಸ ವಿಷಯ ಅಲ್ಲ ನ...