ಭಾರತ, ಏಪ್ರಿಲ್ 4 -- Annayya Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 168ನೇ ಎಪಿಸೋಡ್‌ ಕಥೆ ಹೀಗಿದೆ. ಮಾರಿಗುಡಿ ಶಿವು ಮನೆಯಲ್ಲಿ ಯುಗಾದಿ ಸಂಭ್ರಮ ಕಳೆಗಟ್ಟಿದೆ. ತಂಗಿಯರು ದೇವರಿಗೆ ಪೂಜೆ ಮಾಡುತ್ತಾರೆ. ಈ ದಿನವಾದರೂ ಅಣ್ಣನಿಗೆ ಮತ್ತೊಮ್ಮೆ ನಿನ್ನ ಪ್ರೀತಿಯನ್ನು ಹೇಳಿಕೊಳ್ಳುವಂತೆ ಅತ್ತಿಗೆಗೆ ಹೇಳುತ್ತಾರೆ. ಪೂಜೆ ಮಾಡಲು ಬರುವ ಶಿವು, ತಂಗಿಯರ ಜೊತೆ ಚೆನ್ನಾಗಿ ಮಾತನಾಡುತ್ತಾನೆ. ಆದರೆ ಪಾರು ಏನೇ ಮಾತನಾಡಿದರೂ ಮತ್ತೆ ಪ್ರೀತಿ ಜ್ವರ ಏರಿದಂತೆ ವರ್ತಿಸುತ್ತಾನೆ.

ತಂಗಿಯರಿಗೆ ಬೇವು ಬೆಲ್ಲ ಎರಡನ್ನೂ ಕೊಟ್ಟು ಪಾರುಗೆ ಬೆಲ್ಲ ಮಾತ್ರ ಕೊಡುತ್ತಾನೆ, ಏಕೆ ಮಾವ ಬೇವು ಕೂಡಾ ಕೊಡು ಎಂದು ಪಾರು ಕೇಳಿದಾಗ ಕಹಿ ಎನ್ನುವ ಕಷ್ಟವೆಲ್ಲಾ ನನಗಿರಲಿ, ಸಿಹಿ ಎಂಬ ಸುಖವೆಲ್ಲಾ ನಿನಗಿರಲಿ ಎಂದು ಹೇಳುತ್ತಾನೆ. ಅದನ್ನು ಕೇಳಿ ಪಾರು ಖುಷಿಯಾಗುತ್ತಾಳೆ. ನೀನು ಸೋ ಸ್ವೀಟ್‌ ಮಾವ ಎನ್ನುತ್ತಾಳೆ. ಅದಕ್ಕೆ ಮತ್ತೆ ಶಿವು ದಿಟವಾ ಪಾರು ಎನ್ನುತ್ತಾನೆ. ಮಾವ ನೀನು ಏ...