ಭಾರತ, ಏಪ್ರಿಲ್ 26 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಶುಕ್ರವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 184ನೇ ಎಪಿಸೋಡ್‌ ಕಥೆ ಹೀಗಿದೆ. ನಿಂಗಿ ಹಾಗೂ ಜಯರಾಮನ ಕೊಲೆಯನ್ನು ನೋಡಿದ ಗೋಡಂಬಿ ಸಾಕ್ಷಿಯಾಗಿ ಉಳಿಯಬಾರದು ಎಂದು ಪರಶು ಅವನಿಗೂ ಗುದ್ದಿಲಿಯಿಂದ ಹೊಡೆಯುತ್ತಾನೆ. ಗೋಡಂಬಿ ಪ್ರಜ್ಞೆ ತಪ್ಪಿ ಬೀಳುತ್ತಾನೆ. ಆತ ಸತ್ತ ಎಂದೇ ಪರಶು ತಿಳಿದುಕೊಳ್ಳುತ್ತಾನೆ. ಎಲ್ಲಾ ವಿಚಾರವನ್ನೂ ಅಪ್ಪನ ಬಳಿ ಹೇಳುತ್ತಾನೆ. ಇನ್ನು ಮುಂದೆ ಇಂಥ ಕೆಲಸ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರು, ಯಾವ ಸಾಕ್ಷಿಯನ್ನೂ ಉಳಿಸಬೇಡ, ಈಗ ನಾನು ಎಲ್ಲಾ ನೋಡಿಕೊಳ್ಳುತ್ತೇನೆ ಎಂದು ವೀರಭದ್ರ, ಮಗನಿಗೆ ಧೈರ್ಯ ಹೇಳುತ್ತಾನೆ.

ನಾಗೇಗೌಡ ಹಾಗೂ ಸೋಮೇಗೌಡ ತಮಗಾಗಿ ಡ್ರಿಂಕ್ಸ್‌ ಪಾರ್ಟಿ ಏರ್ಪಡಿಸುತ್ತಾರೆ. ಆದರೆ ನಾವಿಬ್ಬರೇ ಇದ್ದರೆ ಮಜಾ ಬರುವುದಿಲ್ಲ ಈಗ ವೀರಭದ್ರ ಹಾಗೂ ಪರಶು ನಮ್ಮ ಕಡೆ ಇದ್ದಾರೆ, ಅವರನ್ನೂ ಕರೆಯೋಣ ಎಂದು ನಾಗೇಗೌಡ ಹೇಳುತ್ತಾನೆ, ಅಣ್ಣ ಹೇಳಿದ್ದೂ ಸರಿ ಎನಿಸಿ ಪರಶುಗೆ ಸೋಮ ಪೋನ್‌ ಮಾಡುತ್ತಾನೆ. ಇಷ್ಟು ದಿನ ಜೋಶ್...