ಭಾರತ, ಏಪ್ರಿಲ್ 11 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 173ನೇ ಎಪಿಸೋಡ್‌ ಕಥೆ ಹೀಗಿದೆ. ಶಿವುವನ್ನು ಹೇಗಾದರೂ ಮಾಡಿ ಕೊಲೆ ಮಾಡಿ ಪಾರ್ವತಿಯನ್ನು ಸೋಮೇಗೌಡನಿಗೆ ಒಪ್ಪಿಸಬೇಕೆಂದು ವೀರಭದ್ರ ಹಾಗೂ ಪರಶು ಪ್ಲ್ಯಾನ್‌ ಮಾಡುತ್ತಲೇ ಇದ್ದಾರೆ. ವೀರಭದ್ರ ಸ್ವಂತ ಮಗಳ ಜೀವನ ಹಾಳು ಮಾಡಲು ನಾಗೇಗೌಡನ ಜೊತೆ ಕೈ ಜೋಡಿಸಿದ್ದಾನೆ. ಇತ್ತ ಪೊಲೀಸ್‌ ಸ್ಟೇಷನ್‌ನಿಂದ ಮನೆಗೆ ಬರುವ ಪಾರು ತನ್ನ ಪ್ರೀತಿಯ ಮಾವನ ಬಳಿ ಮುತ್ತು ಕೇಳುತ್ತಾಳೆ. ಆದರೆ ಶಿವು ಮುತ್ತು ಕೊಡದೆ ಸತಾಯಿಸುತ್ತಾನೆ.

ಮರುದಿನ ಪಾರು ಮತ್ತೆ ಶಿವು ಬಳಿ ಮುತ್ತು ಕೇಳುತ್ತಾಳೆ. ಅದಕ್ಕೆ ಶಿವು ನಾಚಿ ರೂಮ್‌ನಿಂದ ಹೊರಗೆ ಓಡಿ ಬರುತ್ತಾನೆ. ಅವರನ್ನು ನೋಡಿದ ರತ್ನ, ರಾಣಿ ಏನಾಯ್ತು ಎನ್ನುತ್ತಾರೆ. ನಿನ್ನೆ ರಾತ್ರಿ ನಿಮ್ಮ ಅಣ್ಣ ನನಗೆ ಏನೋ ಕೊಡುತ್ತೇನೆ ಎಂದು ಮಾತು ಕೊಟ್ಟಿದ್ದರು, ಆದರೆ ಈಗ ಅದನ್ನು ಕೊಡದೆ ಸತಾಯಿಸುತ್ತಿದ್ದಾರೆ ಎನ್ನುತ್ತಾಳೆ. ಮಾರಿಗುಡಿ ಶಿವು ಎಂದರೆ ಪ್ರಾಣ ಹೋದರೂ ಕೊಟ್ಟ ಮಾತನ್...