ಭಾರತ, ಏಪ್ರಿಲ್ 10 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 172ನೇ ಎಪಿಸೋಡ್‌ ಕಥೆ ಹೀಗಿದೆ. ಶಿವು ಹಾಗೂ ಪಾರ್ವತಿ ಒಬ್ಬರಿಗೊಬ್ಬರು ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ಧಾರೆ. ಪೊಲೀಸ್‌ ಸ್ಟೇಷನ್‌ಗೆ ಹೋಗಿದ್ದು, ಅಲ್ಲಿ ನಡೆದ ವಿಚಾರವನ್ನು ಶಿವು ತನ್ನ ತಂಗಿಯರಿಂದ ಮುಚ್ಚಿಡುತ್ತಾನೆ. ತಲೆಗೆ ಕಟ್ಟಿದ್ದ ಬ್ಯಾಂಡೇಜ್‌ ನೋಡಿ ರತ್ನ, ರಾಣಿ ಗಾಬರಿಯಾಗುತ್ತಾರೆ. ಅದೊಂದು ಚಿಕ್ಕ ಆಕ್ಸಿಡೆಂಟ್‌ ಅಷ್ಟೇ ಎಂದು ಶಿವು ತನ್ನ ತಂಗಿಯರನ್ನು ಸಮಾಧಾನ ಮಾಡುತ್ತಾನೆ.

ಊಟ ಮುಗಿಸಿ ರೂಮ್‌ನಲ್ಲಿ ಒಬ್ಬನೇ ಕುಳಿತಿದ್ದ ಶಿವು ಬಳಿ ಬರುವ ಪಾರು ಮುತ್ತು ಕೇಳುತ್ತಾಳೆ. ಹೆಂಡತಿ ಹೀಗೆ ಮಾತನಾಡಿದ್ದಕ್ಕೆ ಶಿವು ನಾಚಿಕೊಳ್ಳುತ್ತಾನೆ. ಇದ್ದಕ್ಕಿದ್ದಂತೆ ಹೀಗೆ ಕೇಳಿದರೆ ನನಗೆ ಕಷ್ಟವಾಗುತ್ತದೆ ಎನ್ನುತ್ತಾನೆ, ಮತ್ತೇನು ಮಾವ, ಮೊದಲೇ ನಿನಗೆ ಅಪ್ಲಿಕೇಶನ್‌ ಹಾಕಬೇಕಿತ್ತಾ ಎಂದು ಕೇಳುತ್ತಾಳೆ. ಹಾಗಲ್ಲ ಮುತ್ತು ಕೊಡಲು ಭಯವಾಗುತ್ತಿದೆ ಎಂದು ಶಿವು ಹೇಳುತ್ತಾನೆ. ಪೊಲೀಸ್‌ ಸ್ಟೇಷನ...