Bengaluru, ಏಪ್ರಿಲ್ 16 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 176ನೇ ಎಪಿಸೋಡ್‌ ಕಥೆ ಹೀಗಿದೆ. ಊರಿನ ದಣಿಗಳು ದಂಪತಿ ಸಹಿತ ಬೇರೆ ದಂಪತಿ ಪಾದ ತೊಳೆದರೆ ಅವರಿಗೆ ಶ್ರೇಯಸ್ಸು ಎಂದು ಹೇಳಿದ್ದರಿಂದ ವೀರಭದ್ರ ಒಲ್ಲದ ಮನಸ್ಸಿನಿಂದ ಸುಶೀಲಾ ಜೊತೆ ಶಿವು-ಪಾರ್ವತಿ ಪಾದ ತೊಳೆಯುತ್ತಾನೆ. ಅಪ್ಪ, ಅಮ್ಮ ತನ್ನ ಪಾದ ಮುಟ್ಟಿದ್ದಕ್ಕೆ ಬೇಸರಗೊಳ್ಳುವ ಪಾರ್ವತಿ ಅವರಿಗೆ ನಮಸ್ಕರಿಸಿ ಕ್ಷಮೆ ಕೇಳುತ್ತಾಳೆ. ಅಪ್ಪನ ಕಿವಿ ಬಳಿ ಬಂದು, ಅರ್ಚಕರು ಹೇಳಿದ ಆ ರಾಕ್ಷಸ ನೀನು, ನಾನು ದೇವಿ ರೂಪದಲ್ಲಿ ಬಂದು ನಿನ್ನ ಅಹಂಕಾರವನ್ನು ಸಂಹರಿಸುವ ಪರಿಸ್ಥಿತಿ ತಂದುಕೊಳ್ಳಬೇಡ ಎನ್ನುತ್ತಾಳೆ.

ವೀರಭದ್ರ ಕೋಪದಿಂದಲೇ ಮನೆಗೆ ಬರುತ್ತಾನೆ. ಊರಿನ ದಣಿಯಾದ ನಾನು ಆ ಶಿವು-ಪಾರ್ವತಿ ಪಾದ ತೊಳೆದು ಚಿಕ್ಕವನಾಗಿಬಿಟ್ಟೆ, ಆ ಸುಶೀಲಾಳಿಂದ ನನಗೆ ಇಂದು ಅವಮಾನವಾಯ್ತು ಅವಳು ಇಂದು ಮನೆಗೆ ಬರಲಿ ಎಂದು ಸಿಡಿಮಿಡಿಕೊಳ್ಳುತ್ತಾನೆ. ಸುಶೀಲಾ ಮನೆಗೆ ಬರುತ್ತಿದ್ದಂತೆ ಅವಳನ್ನು ಹೊಡೆಯಲು ಪ್ರಯತ್ನಿ...