Bangalore, ಏಪ್ರಿಲ್ 3 -- Annayya Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 166ನೇ ಎಪಿಸೋಡ್‌ ಕಥೆ ಹೀಗಿದೆ. ಗುಡ್ಡದ ಬಳಿ ಕರೆದೊಯ್ದು ಪಾರ್ವತಿ ತನ್ನ ಪ್ರೀತಿ ವಿಚಾರವನ್ನು ಶಿವು ಬಳಿ ಹೇಳಿಕೊಳ್ಳುತ್ತಾಳೆ. ಆದರೆ ಶಿವು ತಮಾಷೆ ಮಾಡುತ್ತಾನೆ. ಇದರಿಂದ ಬೇಸರಗೊಂಡ ಪಾರು ದೇವಸ್ಥಾನದ ಕಲ್ಯಾಣಿಗೆ ಹಾರುತ್ತಾಳೆ. ಅವಳನ್ನು ಶಿವು ಕಾಪಾಡುತ್ತಾನೆ. ಪಾರು ನಿಜವಾಗಲೂ ನನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದು ಶಿವು ಶಾಕ್‌ ಆಗುತ್ತಾನೆ. ಮೌನಕ್ಕೆ ಜಾರುವ ಶಿವು ದಿಟವಾ ಪಾರು ಎಂಬ ಪದ ಬಿಟ್ಟರೆ ಮತ್ತೇನೂ ಮಾತನಾಡುವುದಿಲ್ಲ.

ಶಿವುಗೆ ಮತ್ತೊಮ್ಮೆ ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳಿ, ಆಗ ಅಣ್ಣ ಸರಿಯಾಗುತ್ತಾನೆ ಎಂದು ಅಂಗಡಿ ಸಹಾಯಕರು ಪಾರುಗೆ ಐಡಿಯಾ ಕೊಡುತ್ತಾರೆ. ಅದು ಒಳ್ಳೆಯ ಉಪಾಯ ಎಂದುಕೊಳ್ಳುವ ಪಾರು, ಹೌದು ನಾಳೆ ಮತ್ತೊಮ್ಮೆ ಮಾವನನ್ನು ಬೇರೆ ಕರೆ ಹೋಗಿ ಪ್ರಪೋಸ್‌ ಮಾಡುತ್ತೇನೆ. ನಾವು ವಾಪಸ್‌ ಬರುವಾಗ ಒಳ್ಳೆ ಪ್ರೇಮಿಗಳಾಗಿ ಬರುತ್ತೇವೆ...