ಭಾರತ, ಏಪ್ರಿಲ್ 22 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 180ನೇ ಎಪಿಸೋಡ್‌ ಕಥೆ ಹೀಗಿದೆ. ಶಿವು ಎಲ್ಲಿ ಹೋದರೂ ಅವನ ಕಿವಿಯಲ್ಲಿ ಯಾರೋ ಅವನ ಹೆಸರನ್ನು ಪಿಸುಗುಟ್ಟಿದಂತೆ ಆಗುತ್ತದೆ. ಇದರಿಂದ ಶಿವು ಗಾಬರಿ ಆಗುತ್ತಾನೆ. ವಿಚಾರ ತಿಳಿದ ಪಾರು ಕೂಡಾ ಗಾಬರಿಯಾಗುತ್ತಾಳೆ. ಶಿವುನನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸುತ್ತಾಳೆ. ಆದರೆ ಅಷ್ಟರಲ್ಲಿ ಊರ ಹಿರಿಯರು ಹಾಗೂ ಅರ್ಚಕರು ಶಿವುನನ್ನು ಹುಡುಕಿಕೊಂಡು ಮನೆಗೆ ಬರುತ್ತಾರೆ.

ಏನು ಎಲ್ಲರೂ ಒಟ್ಟಿಗೆ ಬಂದಿದ್ದೀರ ಎಂದು ಶಿವು ಕೇಳುತ್ತಾನೆ. ದೇವಿ ಮುಂದೆ ದೀಪ ಆರಿ ಹೋಗಿದೆ, ಮಾಕಾಳವ್ವ ಯಾರಿಗೂ ಪ್ರಸಾದವೂ ಕೊಡುತ್ತಿಲ್ಲ, ತಾಯಿ ನಮಗೆ ಏನೋ ಹೇಳಲು ಪ್ರಯತ್ನಿಸುತ್ತಿದ್ದಾಳೆ ಎನಿಸುತ್ತಿದೆ. ಆದ್ದರಿಂದ ನೀನು ಮಾಕಾಳವ್ವನನ್ನು ಕರೆಸಬೇಕು ಎಂದು ಮನವಿ ಮಾಡುತ್ತಾರೆ. ನಾನು ಸಿದ್ಧನಿದ್ದೇನೆ ಎಂದು ಶಿವು ಹೇಳುತ್ತಾನೆ. ಎಲ್ಲಾ ತಯಾರಿ ಮಾಡಿಕೊಳ್ಳುತ್ತೇವೆ ನೀನೂ ಒಂದು ದಿನದ ಬ್ರಹ್ಮಚರ್ಯ ಪಾಲಿಸಲು ದೇವಸ್ಥ...