ಭಾರತ, ಏಪ್ರಿಲ್ 25 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 183ನೇ ಎಪಿಸೋಡ್‌ ಕಥೆ ಹೀಗಿದೆ. ಪಾರ್ವತಿ ಕಿವಿಯಲ್ಲಿ ದೇವಿ ಹೇಳಿದ್ದೇನು ಎಂಬುದನ್ನು ತಿಳಿಯಲು ವೀರಭದ್ರ ಸಾಕಷ್ಟು ಪ್ರಯತ್ನ ಮಾಡುತ್ತಾನೆ. ನಮ್ಮ ವಿಚಾರ ಎಲ್ಲಿ ರಟ್ಟಾಗಿಬಿಡುವುದೋ ಎಂಬ ಭಯದಿಂದ ವೀರಭದ್ರನಿಗೆ ಎದೆ ನೋವು ಬರುತ್ತದೆ. ಅವನನ್ನು ಛತ್ರಿ ಹಾಗೂ ಪರಶು ಸಮಾಧಾನ ಮಾಡುತ್ತಾರೆ. ತನ್ನ ತಂಗಿಯನ್ನು ಮದುವೆ ಆಗುವುದಾಗಿ ಕೇಳಿದ ಮನೆ ಕೆಲಸದ ಜಯರಾಮನನ್ನು ಪರಶು ಕೊಲೆ ಮಾಡುತ್ತಾನೆ. ಅದಕ್ಕೂ ಮುನ್ನ ಜಯರಾಮನ ತಂಗಿ ನಿಂಗಿಯನ್ನು ಕೊಲೆ ಮಾಡಿ ಹೂತಿರುತ್ತಾನೆ. ಅದೇ ದಾರಿಯಲ್ಲಿ ಬರುವ ಗೋಡಂಬಿ, ಪರಶುವನ್ನು ನೋಡಿಬಿಡುತ್ತಾನೆ.

ತಾನು ಕೊಲೆ ಮಾಡಿದ್ದನ್ನು ಗೋಡಂಬಿ ನೋಡಿದ್ದಾನೆ, ಇನ್ನು ಇವನನ್ನು ಸುಮ್ಮನೆ ಬಿಟ್ಟರೆ ಖಂಡಿತ ನನಗೆ ಉಳಿಗಾಲವಿಲ್ಲ ಎಂದುಕೊಂಡು ಪರಶು ಗೋಡಂಬಿಯನ್ನು ಸಾಯಿಸಲು ನಿರ್ಧರಿಸುತ್ತಾನೆ. ಭಯಗೊಂಡ ಗೋಡಂಬಿ ಅಲ್ಲಿಂದ ಓಡಲು ಪ್ರಯತ್ನಿಸುತ್ತಾನೆ, ಆದರೆ ಅವನ ಹಿಂದೆಯೇ ವ...