ಭಾರತ, ಏಪ್ರಿಲ್ 18 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 178ನೇ ಎಪಿಸೋಡ್‌ ಕಥೆ ಹೀಗಿದೆ. ಅಂತೂ ಪಾರ್ವತಿ ಆಸೆ ನೆರವೇರಿದೆ. ಕನಸಿನಲ್ಲಿ ಮಾತ್ರ ಮಾವ ನನಗೆ ಮುತ್ತು ಕೊಡುತ್ತಾರೆ ಎಂದು ನಿರಾಶಳಾಗಿದ್ದ ಪಾರು ನಿಜವಾಗಿಯೂ ಶಿವು ಮಾವನಿಂದ ಮುತ್ತು ಪಡೆದು ಖುಷಿಯಾಗಿದ್ದಾಳೆ. ಈ ನಡುವೆ ಗೋಡಂಬಿ ಹಾಗೂ ಗೊರಕೆ ಇಬ್ಬರೂ ಸೇರಿ ಪಾರು ಹಾಗೂ ಶಿವು ಇಬ್ಬರನ್ನೂ ಇನ್ನಷ್ಟು ಹತ್ತಿರಕ್ಕೆ ಸೇರಿಸುವ ಪ್ರಯತ್ನ ಮಾಡುತ್ತಾರೆ.

ಶಿವು ಬರುವ ಮುನ್ನವೇ ಅಂಗಡಿ ಬಾಗಿಲು ತೆಗೆಯುವ ಗೋಡಂಬಿ ಹಾಗೂ ಗೊರಕೆ ಇದೇನು ಇವತ್ತು ಇನ್ನೂ ಶಿವಣ್ಣ ಬಂದಿಲ್ಲ ಎಂದು ಮಾತನಾಡಿಕೊಳ್ಳುತ್ತಾರೆ. ಶಿವು ಅಣ್ಣ ಈಗ ಪ್ರೇಮಲೋಕದಲ್ಲಿ ಕಳೆದುಹೋಗಿದ್ದಾರೆ. ನಮ್ಮ ಅಣ್ಣನಿಗೆ ಪ್ರೀತಿ ಹೇಳಿಕೊಳ್ಳಲು ಬರುವುದಿಲ್ಲ. ಅದರಿಂದ ಅತ್ತಿಗೆಗೆ ಬೇಸರವಾಗುತ್ತದೆ. ಹೇಗಾದರೂ ಮಾಡಿ ಇವರಿಬ್ಬರನ್ನೂ ಇನ್ನಷ್ಟು ಹತ್ತಿರ ತರಬೇಕು ಎಂದು ಗೋಡಂಬಿ ಹಾಗೂ ಗೊರಕೆ ಸೇರಿ ಒಂದು ಪ್ಲ್ಯಾನ್‌ ಮಾಡುತ್ತಾರೆ. ಚಾಕೊಲೇಟ್‌...