ಭಾರತ, ಏಪ್ರಿಲ್ 17 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 177ನೇ ಎಪಿಸೋಡ್‌ ಕಥೆ ಹೀಗಿದೆ. ನನಗೆ ಒಂದು ಮುತ್ತು ಕೊಡುವಂತೆ ಪಾರು ತನ್ನ ಪ್ರೀತಿಯ ಮಾವನನ್ನು ಕೇಳುತ್ತಲೇ ಇದ್ದಾಳೆ. ಆದರೆ ಶಿವು ಮಾತ್ರ ನಾಚಿಕೆಯಿಂದ ಬೆಳಗ್ಗೆ ಕೊಡುವೆ, ಸಂಜೆ ಕೊಡುವೆ ಎಂದು ಸತಾಯಿಸುತ್ತಲೇ ಇದ್ದಾನೆ. ರಾತ್ರಿ ಮಲಗಿರುವ ಪಾರುವನ್ನು ಎಬ್ಬಿಸುವ ಶಿವು ಅವಳಿಗೆ ಮುತ್ತು ಕೊಡುತ್ತಾನೆ. ಆದರೆ ಅದು ಪಾರು ಕಂಡ ಕನಸಾಗಿರುತ್ತದೆ.

ಮಾವ ನನಗೆ ಮುತ್ತು ಕೊಟ್ಬಿಟ್ಯಾ ಎಂದು ಪದೇ ಪದೇ ಹೇಳುತ್ತಲೇ ಪಾರು ಕೆನ್ನೆ ಮುಟ್ಟಿಕೊಳ್ಳುತ್ತಾಳೆ. ಇದ್ದಕ್ಕಿದ್ದಂತೆ ಅವಳಿಗೆ ಎಚ್ಚರವಾಗುತ್ತದೆ. ಪಕ್ಕದಲ್ಲಿ ನೋಡಿದರೆ ಶಿವು ಗೊರಕೆ ಹೊಡೆಯುತ್ತಾ ನಿದ್ರೆ ಮಾಡುತ್ತಿದ್ದಾನೆ. ಅಯ್ಯೋ ಇಷ್ಟೊತ್ತು ನಾನು ಕಂಡಿದ್ದು ಕನಸಾ ಎಂದು ಪಾರು ನಿರಾಶಳಾಗುತ್ತಾಳೆ. ಮಲಗಿದ್ದ ಶಿವುವನ್ನು ಎಬ್ಬಿಸುತ್ತಾಳೆ. ಮುತ್ತು ಕೇಳಿದರೆ ಕೊಡುವುದಿಲ್ಲ, ಆದರೆ ಕನಸಿನಲ್ಲಿ ಬಂದು ಮುತ್ತು ಕೊಡಲು ಎಷ್ಟು ಧೈರ್ಯ ಎನ್ನುತ...