ಭಾರತ, ಏಪ್ರಿಲ್ 23 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಮಂಗಳವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 181ನೇ ಎಪಿಸೋಡ್‌ ಕಥೆ ಹೀಗಿದೆ. ದೇವಸ್ಥಾನದಲ್ಲಿ ನಡೆಯುತ್ತಿರುವ ಅಪಶಕುನಗಳ ಬಗ್ಗೆ ಅರ್ಚಕರು ಹಾಗೂ ಊರ ಹಿರಿಯರು ಶಿವು ಬಳಿ ಹೇಳುತ್ತಾರೆ. ದೇವಿ ಕರೆಸಲು ನಾನು ಸಿದ್ಧನಿದ್ದೇನೆ ಎಂದು ಶಿವು ಹೇಳುತ್ತಾನೆ. ಅಡುಗೆ ಮಾಡಿಕೊಳ್ಳಲು ಬೇಕಾದ ಎಲ್ಲಾ ಸಾಮಗ್ರಿಗಳನ್ನು ಬ್ಯಾಗ್‌ನಲ್ಲಿಟ್ಟುಕೊಂಡು ಪಾರ್ವತಿ ಹಾಗೂ ತಂಗಿಯರಿಗೆ ಹೇಳಿ ಶಿವು ದೇವಸ್ಥಾನಕ್ಕೆ ಹೋಗುತ್ತಾನೆ. ಪೂಜೆ ಸಮಯದಲ್ಲಿ ಮಾಕಾಳವ್ವನ ಪಲ್ಲಕ್ಕಿಯನ್ನು ಎತ್ತಿಕೊಳ್ಳಲು ಶಿವುಗೆ ಸಾಧ್ಯವಾಗುವುದಿಲ್ಲ.

ಇದುವರೆಗೂ ಯಾವತ್ತೂ ಈ ರೀತಿ ಆಗಿರಲಿಲ್ಲ, ಆದರೆ ಈಗೇಕೆ ಈ ರೀತಿ ಆಗುತ್ತಿದೆ ಎಂದು ಎಲ್ಲರೂ ಭಯಭೀತರಾಗುತ್ತಾರೆ. ಶಿವು ಕೂಡಾ ಆತಂಕಕ್ಕೆ ಒಳಗಾಗುತ್ತಾನೆ. ಮಾಕಾಳವ್ವ ಯಾಕವ್ವ ನಾನು ಏನು ತಪ್ಪು ಮಾಡಿದ್ದೇನೆಂದು ಹೇಳಿಬಿಡು, ಶಿಕ್ಷೆನೂ ಕೊಡು. ಇಷ್ಟು ವರ್ಷ ನಿನ್ನನ್ನು ಸುಲಭವಾಗಿ ಎತ್ತಿಕೊಳ್ಳುತ್ತಿದ್ದೆ, ಆದರೆ ಇವತ್ತು ಮುಟ್ಟೋಕೂ ಆ...