Bengaluru, ಮೇ 1 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 187ನೇ ಎಪಿಸೋಡ್‌ ಕಥೆ ಹೀಗಿದೆ. ಗೋಡಂಬಿ ಬಗ್ಗೆ ತಿಳಿದುಕೊಳ್ಳಲು ವೀರಭದ್ರ, ಪರಶು ಆಸ್ಪತ್ರೆಗೆ ಬರುತ್ತಾರೆ. ಪರಶು ಗಾಬರಿಯಾಗಿರುವುದನ್ನು ಕಂಡು ಪಾರ್ವತಿ ಅನುಮಾನ ವ್ಯಕ್ತಪಡಿಸಿ ಅವನ ಬಿಪಿ ಚೆಕ್‌ ಮಾಡುತ್ತಾಳೆ. ನೀವೆಲ್ಲಾ ಮನೆಗೆ ಹೋಗಿ ಎಂದು ಶಿವು ಹೇಳಿದರೂ ಇಲ್ಲೇ ಇರುತ್ತೇನೆ ಎಂದು ಪರಶು ಹೇಳುತ್ತಾನೆ. ಆದರೆ ಪಾರ್ವತಿ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ನಾವು ಇಲ್ಲಿದ್ದು ಗೋಡಂಬಿಯನ್ನು ನೋಡಿಕೊಳ್ಳುತ್ತೇವೆ. ನೀವು ಮನೆಗೆ ಹೋಗಿ ಎನ್ನುತ್ತಾಳೆ. ಬೇರೆ ದಾರಿ ಇಲ್ಲದೆ ವೀರಭದ್ರ, ಪರಶು ಹಾಗೂ ಛತ್ರಿ ಅಲ್ಲಿಂದ ಹೊರಡುತ್ತಾರೆ.

ವಾರ್ಡ್‌ನಿಂದ ದೂರ ಬರುವ ಮೂವರೂ ಗೋಡಂಬಿಯನ್ನು ಕೊಲ್ಲುವುದು ಹೇಗೆ ಎಂದು ಮಾತನಾಡಿಕೊಳ್ಳುತ್ತಾರೆ. ಪಾರ್ವತಿ ಏಕೆ ಹೀಗೆ ಕೋಪಗೊಂಡಿದ್ದಾಳೆ. ಅವಳಿಗೆ ನನ್ನ ಮೇಲೆ ಅನುಮಾನ ಬಂದಿದೆಯಾ ಹೇಗೆ? ಅವನು ಈಗ ಎಚ್ಚರವಾಗಿ ನನ್ನ ಬಗ್ಗೆ ಹೇಳಿಬಿಟ್ಟರೆ ಕಷ್ಟ, ಏನೂ ಗೊತ...