Bengaluru, ಏಪ್ರಿಲ್ 24 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 182ನೇ ಎಪಿಸೋಡ್‌ ಕಥೆ ಹೀಗಿದೆ. ಶಿವು ಮೈ ಮೇಲೆ ಬರುವ ಮಾಕಾಳವ್ವ ಊರಿಗೆ ಒಳ್ಳೆ ಮಳೆ, ಬೆಳೆ ಆಗುತ್ತದೆ ಎಂದು ಹೇಳುತ್ತಾಳೆ. ಮಾಕಾಳವ್ವನ ಬಳಿ ಪಾರ್ವತಿ ತನ್ನ ಗಂಡ ಶಿವು ತಾಯಿಯ ಬಗ್ಗೆ ರಶ್ಮಿ ಮೂಲಕ ಪ್ರಶ್ನೆಗಳನ್ನು ಕೇಳಿಸುತ್ತಾಳೆ. ನಿನ್ನ ತಾಯಿ ಮುಂದೆಯೇ ನಿನ್ನ ಮದುವೆ ಆಯ್ತು ಎಂದು ತಾಯಿ ಹೇಳುತ್ತಾಳೆ. ಮತ್ತೊಂದು ಪ್ರಶ್ನೆ ಕೇಳಲು ಮುಂದಾದಾಗ ಪಾರು ಬಳಿ ಬರುವ ದೇವಿ, ಪ್ರಶ್ನೆಯೇ ಜೀವನವಲ್ಲ, ಹುಡುಕು ಉತ್ತರ ಸಿಗುತ್ತದೆ ಎಂದು ಒಗಟಾಗಿ ರಹಸ್ಯ ಹೇಳಿ ಶಿವುನನ್ನು ಬಿಟ್ಟು ಹೋಗುತ್ತಾಳೆ.

ಬೆಳಗ್ಗೆ ಪಾರು ಹಾಗೂ ತಂಗಿಯರು ಎಂದಿನಂತೆ ನಿದ್ರೆಯಿಂದ ಎಚ್ಚರವಾಗುತ್ತಾರೆ. ಇಷ್ಟು ಹೊತ್ತಾದರೂ ಶಿವು ಮಾವ ಎದ್ದಿಲ್ಲ, ಎಬ್ಬಿಸುತ್ತೇನೆ ಎಂದು ಪಾರು ರೂಮ್‌ ಬಳಿ ಹೋಗುತ್ತಾಳೆ. ಅವಳನ್ನು ತಡೆಯುವ ಶಿವು ತಂಗಿಯರು, ನಿನ್ನೆ ರಾತ್ರಿ ಮಾಕಾಳವ್ವ ಅಣ್ಣನ ಮೈ ಮೇಲೆ ಬಂದಿದ್ದಳಲ್ಲ ಅದರ ಮರುದಿನ ಅಣ್...