ಭಾರತ, ಏಪ್ರಿಲ್ 30 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಮಂಗಳವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 186ನೇ ಎಪಿಸೋಡ್‌ ಕಥೆ ಹೀಗಿದೆ. ರೌಡಿಗಳನ್ನು ಹೊಡೆದು ಓಡಿಸಿ ಗೋಡಂಬಿಯನ್ನು ಪಾರು-ಶಿವು ನಗರದ ಆಸ್ಪತ್ರೆಗೆ ಬಂದು ಸೇರಿಸುತ್ತಾರೆ. ಗೋಡಂಬಿ ಇನ್ನೂ ಸತ್ತಿಲ್ಲ ಎಂದು ತಿಳಿದು ಗಾಬರಿಯಾಗುವ ಪರಶು ಅವನನ್ನು ಆಸ್ಪತ್ರೆಯಲ್ಲೇ ಕೊಲ್ಲಬೇಕೆಂದು ನಿರ್ಧರಿಸುತ್ತಾನೆ. ವೀರಭದ್ರ ಹಾಗೂ ಪರಶು ಇಬ್ಬರೂ ಆಸ್ಪತ್ರೆಗೆ ಬರುತ್ತಾರೆ. ಅಷ್ಟರಲ್ಲಿ ಗೋಡಂಬಿಗೆ ಪ್ರಜ್ಞೆ ಬರುತ್ತದೆ. ಪರಶುವನ್ನು ನೋಡಿ ಗೋಡಂಬಿ ಗಾಬರಿಯಾಗಿ ಅವನತ್ತ ಕೈ ತೋರಿಸುತ್ತಾನೆ. ಡಾಕ್ಟರ್‌ ಬಂದು ಎಲ್ಲರನ್ನೂ ಹೊರ ಕಳಿಸುತ್ತಾರೆ.

ಪರಶು ಅಷ್ಟು ಗಾಬರಿ ಆಗಿರುವುದನ್ನು ಕಂಡು ಪಾರ್ವತಿಗೆ ಅನುಮಾನ ಶುರುವಾಗುತ್ತದೆ. ಅಣ್ಣನನ್ನು ಕೂರಿಸಿ ಅವನ ನಾಡಿಮಿಡಿತ ಚೆಕಪ್‌ ಮಾಡುವ ಪಾರು, ಏಕೆ ಈ ರೀತಿ ಆಗ್ತಿದೆ ಎಂದು ಕೇಳುತ್ತಾಳೆ. ಆಸ್ಪತ್ರೆಯವರಿಂದ ಬಿಪಿ ಮಾನಿಟರ್‌ ಪಡೆದು ಪರಶುಗೆ ಬಿಪಿ ಚೆಕ್‌ ಮಾಡಲು ಮುಂದಾಗುತ್ತಾಳೆ. ಪಾರು ನನಗೆ ಬಿಪಿ ಇಲ...