ಭಾರತ, ಏಪ್ರಿಲ್ 1 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಕುತೂಹಲಕಾರಿ ಘಟ್ಟದಲ್ಲಿದೆ. ಹೇಗಾದರೂ ಮಾಡಿ ಶಿವು ಹಾಗೂ ಪಾರ್ವತಿಯನ್ನು ದೂರ ಮಾಡಬೇಕೆಂದು ವೀರಭದ್ರ ಮಾಡುತ್ತಿರುವ ಪ್ಲ್ಯಾನ್‌ಗಳು ಉಲ್ಟಾ ಆಗುತ್ತಿವೆ. ಡಿವೋರ್ಸ್‌ ವಿಚಾರ ತಿಳಿದು, ಈ ಬಾರಿ ಇಬ್ಬರನ್ನೂ ದೂರ ಮಾಡೇ ತೀರುತ್ತೇನೆ, ಎಲ್ಲರ ಮುಂದೆ ಅವಮಾನ ಮಾಡುತ್ತೇನೆ ಎಂದು ನಿರ್ಧರಿಸಿ ಪಂಚಾಯ್ತಿ ಕರೆಯುತ್ತಾನೆ. ಆದರೆ ಅದರಲ್ಲೂ ಸೋಲುತ್ತಾನೆ. ಪಾರ್ವತಿ ನನ್ನ ಮನೆ ದೇವತೆ ಅವಳು ಎಂದಿಗೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎಂದು ಹೇಳಿ, ಶಿವು ಊರಿನವರ ಹಾಗೂ ವೀರಭದ್ರನ ಬಾಯಿ ಮುಚ್ಚಿಸುತ್ತಾನೆ.

ಈ ಬಾರಿಯೂ ನನ್ನ ತಂತ್ರ ಫಲಿಸಲಿಲ್ಲ ಎಂದು ವೀರಭದ್ರ ಸಿಟ್ಟಾಗುತ್ತಾನೆ. ಅವರಿಬ್ಬರೂ ಪ್ರೀತಿಯ ಬಲೆಯಲ್ಲಿ ಈಜಾಡುತ್ತಿದ್ದಾರೆ, ಅದೇ ಜಾಲದಲ್ಲಿ ಅವರಿಬ್ಬರನ್ನೂ ಬಂಧಿ ಮಾಡಲೇಬೇಕು , ನಾನು ಮಾಡಿದ 100 ಉಪಾಯಗಳಲ್ಲಿ ಒಂದಾದರೂ ಯಶಸ್ವಿ ಆಗೇ ಆಗುತ್ತದೆ ಎಂದು ವೀರಭದ್ರ ಹಾಗೂ ಪಾರು ಅಣ್ಣ ಒಬ್ಬರಿಗೊಬ್ಬರು ಸಮಾಧಾನ ಮಾಡಿಕೊಳ್ಳುತ್ತಾರೆ. ಇತ್ತ ಪ...