ಭಾರತ, ಏಪ್ರಿಲ್ 19 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಶುಕ್ರವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 179ನೇ ಎಪಿಸೋಡ್‌ ಕಥೆ ಹೀಗಿದೆ. ಶಿವು ಹಾಗೂ ಪಾರ್ವತಿಯನ್ನು ಇನ್ನಷ್ಟು ಹತ್ತಿರ ಮಾಡಬೇಕೆಂಬ ಉದ್ದೇಶದಿಂದ ಗೋಡಂಬಿ ಹಾಗೂ ಗೊರಕೆ ಚಾಕೊಲೇಟ್‌ ಮೇಲೆ ಪಾರು ಐ ಲವ್‌ ಯೂ ಎಂದು ಬರೆಸಿ ಅದನ್ನು ಶಿವುಗೆ ಗೊತ್ತಾಗದಂತೆ ಅವನ ಜೇಬಿಗೆ ಹಾಕುತ್ತಾರೆ. ಮನೆಗೆ ಬಂದಾಗ ಶಿವು ಜೇಬಿನಿಂದ ಚಾಕೊಲೇಟ್‌ ಕೆಳಗೆ ಬೀಳುತ್ತದೆ. ಅದನ್ನು ನೋಡಿ ರಾಣಿ , ರತ್ನ ಅಣ್ಣನ ಕಾಲೆಳೆಯುತ್ತಾರೆ. ನನ್ನ ಬಗ್ಗೆ ಮಾವನಿಗೆ ಎಷ್ಟು ಪ್ರೀತಿ ಇದೆ ಎಂದು ಪಾರು ಖುಷಿಯಾಗುತ್ತಾಳೆ. ಚಾಕೊಲೇಟ್‌ ಮೇಲೆ ಏನು ಬರೆದಿದೆ ಎಂದು ಗೊತ್ತಾಗದೆ ಶಿವು ಗೊಂದಲಕ್ಕೊಳಗಾಗುತ್ತಾನೆ.

ವೀರಭದ್ರ, ಮನೆಯಲ್ಲಿ ಶಿವು ಬಗ್ಗೆಯೇ ಯೋಚಿಸುತ್ತಿರುತ್ತಾನೆ. ದೇವಸ್ಥಾನದ ಅರ್ಚಕರು ಹಾಗೂ ಊರ ಹಿರಿಯರು ಅವರ ಬಳಿ ಗಾಬರಿಯಿಂದ ಓಡೋಡಿ ಬರುತ್ತಾರೆ. 2-3 ದಿನಗಳಿಂದ ದೇವಸ್ಥಾನದಲ್ಲಿ ಅಪಶಕುನಗಳು ನಡೆಯುತ್ತಲೇ ಇದೆ. ಆದರೆ ಇಂದು ದೇವಿ ಮುಂದೆ ಹಚ್ಚಿದ್ದ ದೀಪವೇ ...