ಭಾರತ, ಏಪ್ರಿಲ್ 9 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಮಂಗಳವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 171ನೇ ಎಪಿಸೋಡ್‌ ಕಥೆ ಹೀಗಿದೆ. ಪಾರ್ವತಿ ಮೇಲೆ ಕಳ್ಳತನದ ಆರೋಪ ಹೊರಿಸಿದ್ದೂ ಅಲ್ಲದೆ, ಪೊಲೀಸ್‌ ಸ್ಟೇಷನ್‌ನಲ್ಲಿ ಶಿವುವನ್ನು ಕೊಲ್ಲುವ ಸಂಚು ನಡೆಯುತ್ತದೆ. ಸೋಮ ಶಿವು ತಲೆಗೆ ಹೊಡೆದಾಗ ಆತ ಪ್ರಜ್ಞೆ ತಪ್ಪಿ ಬೀಳುತ್ತಾನೆ. ಆದರೆ ಪಾರು ಅರಚಾಟಕ್ಕೆ ಶಿವು ಎದ್ದು ಇನ್ಸ್‌ಪೆಕ್ಟರ್‌ಗೆ ಹೊಡೆಯಲು ಮುಂದಾದಾಗ ವೀರಭದ್ರ ಬಂದು ತಡೆಯುತ್ತಾನೆ. ಪಾರ್ವತಿಯನ್ನೂ ಬಿಡಿಸಿ ಇಬ್ಬರೂ ಮನೆಗೆ ಹೋಗುವಂತೆ ಕಳಿಸುತ್ತಾನೆ.

ಶಿವು ನನ್ನ ಮೇಲೆ ನಂಬಿಕೆ ಕಳೆದುಕೊಂಡಿದ್ದಾನೆ. ಅವನಿಗೆ ಮತ್ತೆ ನನ್ನ ಮೇಲೆ ನಂಬಿಕೆ, ಗೌರವ ಬರಬೇಕೆಂದರೆ ನಾವು ಸದ್ಯಕ್ಕೆ ಈ ವಿಚಾರ ಕೈ ಬಿಡಬೇಕು. ಪೊಲೀಸ್‌ ಸ್ಟೇಷನ್‌ನಲ್ಲಿ ಅವನನ್ನು ಸಾಯಸಿದ್ದರೆ ಅದು ವಿಧಾನಸೌಧದಲ್ಲಿ ಚರ್ಚೆಯಾಗಿ ತನಿಖೆ ಆಗಿ ನಮ್ಮ ಹೆಸರು ಹೊರ ಬರುತ್ತಿತ್ತು. ಅದಕ್ಕೆ ನಾನು ಅವನ ಕೊಲೆ ಪ್ರಯತ್ನ ತಡೆದೆ ಎಂದು ವೀರಭದ್ರ ವಿವರಿಸುತ್ತಾನೆ. ಪಾರು ಹಾಗೂ ಶಿವು ಇಬ್...