ಭಾರತ, ಏಪ್ರಿಲ್ 5 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 169ನೇ ಎಪಿಸೋಡ್‌ ಕಥೆ ಹೀಗಿದೆ. ನಾನು ನಿನ್ನ ಪ್ರೀತಿಸುತ್ತಿದ್ದೇನೆ ಎಂದು ಹೇಳಿದರೂ ಮೌನಕ್ಕೆ ಜಾರಿದ ಶಿವು ಬಗ್ಗೆ ಪಾರು ಬೇಸರ ವ್ಯಕ್ತಪಡಿಸುತ್ತಾಳೆ. ಮತ್ತೊಮ್ಮೆ ಅವನಿಗೆ ತನ್ನ ಪ್ರೀತಿಯನ್ನು ಅರ್ಥ ಮಾಡಿಸಲು ದೇವಸ್ಥಾನದ ಬಳಿ ಕರೆದೊಯ್ಯುತ್ತಾಳೆ. ಒಂದೇ ಉಸಿರಿನಲ್ಲಿ ತನ್ನ ಪ್ರೀತಿಯನ್ನು ಹೇಳಿಕೊಳ್ಳುತ್ತಾಳೆ. ಉಸಿರು ಬಿಡದೆ ಪಾರು ಒಂದೇ ಸಮ ಮಾತನಾಡುವುದನ್ನು ಕಂಡು ಶಿವು, ನಿಲ್ಲಿಸು ಪಾರು ಉಸಿರು ತೆಗೆದುಕೋ ಎನ್ನುತ್ತಾನೆ.

ನಾನೂ ನಿನ್ನನ್ನು ಬಹಳ ಪ್ರೀತಿಸುತ್ತಿದ್ದೇನೆ, ಚಿಕ್ಕಂದಿನಿಂದ ನಾನು ಬಹಳ ಇಷ್ಟಪಟ್ಟ ಹುಡುಗಿ ಕೂಡಾ ನನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದು ನನಗೆ ಶಾಕ್‌ ಆಯ್ತು, ನನಗೆ ಮಾತುಗಳೇ ಹೊರಡಲಿಲ್ಲ ಎಂದು ಹೇಳುತ್ತಾ ಪಾರು ಕಡೆ ತಿರುಗಿ ನೋಡುವಷ್ಟರಲ್ಲಿ ಆಕೆ ನಾಪತ್ತೆಯಾಗಿರುತ್ತಾಳೆ. ಇದ್ದಕ್ಕಿದ್ದಂತೆ ಪಾರು ಎಲ್ಲಿ ಹೋದಳು ಎಂದು ಶಿವು ಗಾಬರಿಯಾಗುತ್ತಾನೆ....