Bengaluru, ಮೇ 29 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಬುಧವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 208ನೇ ಎಪಿಸೋಡ್‌ ಕಥೆ ಹೀಗಿದೆ. ಘಟಿಕೋತ್ಸವದಲ್ಲಿ ಎಲ್ಲರೂ ಪದವಿ ಸ್ವೀಕರಿಸುತ್ತಾರೆ. ಗೆಳತಿಯರನ್ನು ಭೇಟಿಯಾಗಲು ಅಲ್ಲಿಗೆ ಬಂದಿದ್ದ ಪಾರು ಮನೆಗೆ ಹೊರಡಲು ಮುಂದಾಗುತ್ತಾಳೆ. ಅಷ್ಟರಲ್ಲಿ ಆಕೆಯನ್ನು ವೇದಿಕೆ ಮೇಲೆ ಕರೆದು ಸನ್ಮಾನ ಮಾಡಲಾಗುತ್ತದೆ. ಆಕೆಯ ಸಾಧನೆಯನ್ನು ಎಲ್ಲರೂ ಕೊಂಡಾಡುತ್ತಾರೆ. ನಿಮಗೆ ಇನ್ನೂ ಒಂದು ಗಿಫ್ಟ್‌ ಇದೆ ಎಂದು ಪಾರ್ವತಿ ಪ್ರೊಫೆಸರ್‌ ಹೇಳುತ್ತಾರೆ.

ನಿಮಗೆ ನಾವು ಮೆಡಿಕಲ್‌ ಲೈಸನ್ಸ್‌ ನೀಡುತ್ತಿದ್ದೇವೆ ಎಂದು ಪ್ರೊಫೆಸರ್‌ ಹೇಳಿದಾಗ ಪಾರ್ವತಿ ಆಶ್ಚರ್ಯ ವ್ಯಕ್ತಪಡಿಸುತ್ತಾಳೆ. ಮೆಡಿಕಲ್‌ ಲೈಸನ್ಸ್‌ ಪೋಸ್ಟ್‌ ಮೂಲಕ ಬಂದಿದ್ದರೂ ಅದು ನನ್ನ ಕೈಗೆ ಸಿಗದೆ ಮಿಸ್‌ ಆಗಿದೆ, ಈಗ ಮತ್ತೆ ನೀವು ಲೈಸನ್ಸ್‌ ಬಗ್ಗೆ ಹೇಳುತ್ತಿದ್ದೀರ ನನಗೆ ಅರ್ಥವಾಗುತ್ತಿಲ್ಲ ಸರ್‌ ಎಂದು ಪಾರ್ವತಿ ಹೇಳುತ್ತಾಳೆ. ಹೌದು ಹಾಗೆ ಎಲ್ಲರಿಗೂ ಲೈಸನ್ಸ್‌ ಮತ್ತೆ ದೊರೆಯುವುದಿಲ್ಲ, ಆದರೆ ನಿಮಗೆ ಸ...