Puttur, ಏಪ್ರಿಲ್ 15 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 175ನೇ ಎಪಿಸೋಡ್ ಕಥೆ ಹೀಗಿದೆ. ರತ್ನ ಗಮನವನ್ನು ತನ್ನತ್ತ ತಿರುಗಿಸಲು ಪರಶು ತನಗೆ ಅಪಘಾತವಾದಂತೆ ನಾಟಕವಾಡುತ್ತಾನೆ. ದಾರಿ ಮಧ್ಯೆ ಪರಶುವನ್ನು ನೋಡುವ ಶಿವು ಅವನನ್ನು ಆಸ್ಪತ್ರೆಗೆ ಕರೆದೊಯ್ದು ನಂತರ ಮನೆಗೆ ಕರೆದೊಯ್ಯುತ್ತಾನೆ. ಪರಶು ಬುದ್ಧಿ ಅರಿತಿರುವ ರತ್ನ ಹಾಗೂ ಪಾರ್ವತಿ ಅವನಿಗೆ ಬೈಯ್ಯುತ್ತಾರೆ. ಅಷ್ಟಾದರೂ ಪರಶು ಮಾತ್ರ ತಾನು ಬದಲಾದಂತೆ ನಟಿಸಿ ಅವರ ಮಾತಿಗೆ ಏನೂ ಪ್ರತಿಕ್ರಿಯಿಸದೆ ಸುಮ್ಮನಾಗುತ್ತಾನೆ.
ಶಿವು ಹಾಗೂ ಪಾರ್ವತಿ ಮಾಕಾಳವ್ವನ ದೇವಸ್ಥಾನಕ್ಕೆ ಬರುತ್ತಾರೆ. ಇವತ್ತು ಏನು ವಿಶೇಷ ಮಾವ, ದೇವಸ್ಥಾನಕ್ಕೆ ಏಕೆ ಕರೆದುಕೊಂಡು ಬಂದೆ ಎಂದು ಪಾರ್ವತಿ ಕೇಳುತ್ತಾಳೆ. ನನಗೂ ಗೊತ್ತಿಲ್ಲ ಪಾರು, ನಿನ್ನೆ ನನ್ನ ಕನಸಿನಲ್ಲಿ ಮಾಕಾಳವ್ಬ ಬಂದು ಮಗ, ಸ್ವಲ್ಪ ಕೆಲಸ ಇದೆ ನೀನು ಗುಡಿಗೆ ಬಾ ಅಂದ್ಲು, ಅವತ್ತು ಮನೆ ಹರಾಜಿಗೆ ಬಂದಾಗ ಕೂಡಾ ದೇವಿ ನನ್ನನ್ನು ಕರೆದಂತೆ ಆಯ್ತು, ಆ ದಿನವೂ ನಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.