Bengaluru, ಮೇ 28 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಮಂಗಳವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 207ನೇ ಎಪಿಸೋಡ್‌ ಕಥೆ ಹೀಗಿದೆ. ಘಟಿಕೋತ್ಸವಕ್ಕೆ ಪಾವರ್ತಿ ಜೊತೆ ಬಂದ ಶಿವುಗೆ ಅವಳ ಸಹಪಾಠಿಯೊಬ್ಬ ಕೂಲಿ ಎಂದು ಕರೆದು ಅವಮಾನ ಮಾಡುತ್ತಾನೆ. ಸಿಟ್ಟು ತಾಳಲಾರದೆ ಪಾರ್ವತಿ ಅವನಿಗೆ ಬಾಟಲ್‌ನಿಂದ ಹೊಡೆಯುತ್ತಾಳೆ. ಮತ್ತೊಂದೆಡೆ ಮಾದಪ್ಪಣ್ಣ ತನ್ನ ಸೊಸೆ ರಶ್ಮಿಗೆ ತಾನೇ ಕೈಯಾರೆ ಅಡುಗೆ ಮಾಡಿ ಬಡಿಸಲು ಮುಂದಾಗುತ್ತಾನೆ. ಮಾವ ಸೊಸೆ ಇಬ್ಬರೂ ಅಡುಗೆ ಮಾಡುವುದನ್ನು ಕಂಡು ಲೀಲಾ ಸಿಟ್ಟಾಗುತ್ತಾಳೆ.

ಅಡುಗೆ ಮನೆಯಲ್ಲಿ ಸುವಾಸನೆ ಬರುವುದನ್ನು ಗಮನಿಸಿದ ಜಿಮ್‌ ಸೀನ ಅಡುಗೆ ಏನೆಂದು ನೋಡಲು ಅಲ್ಲಿಗೆ ಬರುತ್ತಾನೆ. ರಶ್ಮಿ ಹಾಗೂ ತನ್ನ ಅಪ್ಪ ಇಬ್ಬರೂ ಸೇರಿ ಅಡುಗೆ ಮಾಡುತ್ತಿರುವುದನ್ನು ನೋಡಿ ಆಶ್ಚರ್ಯಗೊಳ್ಳುತ್ತಾನೆ. ಈ ದಿನ ಏನು ವಿಶೇಷ ಎಂದು ಸೀನ ಕೇಳುತ್ತಾನೆ. ಏನಿಲ್ಲ ನನ್ನ ಸೊಸೆ ರಶ್ಮಿಗಾಗಿ ಟೊಮೆಟೊ ಬಾತ್‌ ಹಾಗೂ ಪಾಯಸ ಮಾಡುತ್ತಿದ್ದೇನೆ ಎನ್ನುತ್ತಾನೆ. ಗಂಡ, ಸೊಸೆ ಜೊತೆ ಈಗ ಮಗನೂ ಸೇರಿದ್ದನ...