ಭಾರತ, ಏಪ್ರಿಲ್ 12 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಶುಕ್ರವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 174ನೇ ಎಪಿಸೋಡ್‌ ಕಥೆ ಹೀಗಿದೆ. ಒಂದೆಡೆ ಶಿವು ಜೀವಕ್ಕೆ ಸಂಚಕಾರ ತರಬೇಕು, ಪಾರ್ವತಿಯನ್ನು ಸೋಮೇಗೌಡನಿಗೆ ಒಪ್ಪಿಸಬೇಕು, ಅದರ ಜೊತೆ ಜೊತೆಗೆ ತಾನು ಇಷ್ಟ ಪಟ್ಟ ಶಿವು ತಂಗಿ ರತ್ನಳನ್ನು ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂಬ ಆಸೆಯಿಂದ ಪರಶು ಆಕ್ಸಿಡೆಂಟ್‌ ನಾಟಕವಾಡುತ್ತಾನೆ, ರಸ್ತೆಯಲ್ಲಿ ಬಿದ್ದಿದ್ದ ಪರಶುವನ್ನು ಶಿವು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಅಲ್ಲಿಂದ ತನ್ನ ಮನೆಗೆ ಕರೆದೊಯ್ಯುತ್ತಾನೆ.

ಅಣ್ಣನನ್ನು ನೋಡುತ್ತಿದ್ದಂತೆ ಪಾರು ಸಿಟ್ಟಾಗುತ್ತಾಳೆ. ಅಯ್ಯೋ ಏನಾಯ್ತೋ ಅಣ್ಣ, ಅದಕ್ಕೆ ಎಲ್ಲರ ಬಳಿ ದ್ವೇಷ ಕಟ್ಟಿಕೊಳ್ಳಬಾರದು ಅನ್ನೋದು, ಇಂದು ಯಾರೋ ಬಂದು ಆಕ್ಸಿಡೆಂಟ್‌ ಮಾಡಿದ, ಇದು ಹೀಗೇ ಮುಂದುವರೆದರೆ ಯಾರೋ ಬಂದು ಗಾಡಿ ಹತ್ತಿಸಿಕೊಂಡು ಹೋಗ್ತಾನೆ, ನಂತರ ನಾಲ್ಕು ಜನರು ಬಂದು ಹೊತ್ತುಕೊಂಡು ಹೋಗ್ತಾರೆ ಅಷ್ಟೇ ಎಂದು ವ್ಯಂಗ್ಯವಾಡುತ್ತಾಳೆ. ಸ್ವಂತ ಅಣ್ಣನಿಗೆ ಪಾರು ಈ ರೀತ...