ಭಾರತ, ಮೇ 27 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಸೋಮವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 206ನೇ ಎಪಿಸೋಡ್‌ ಕಥೆ ಹೀಗಿದೆ. ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಪರಶು ಸಮಯ ನೋಡಿಕೊಂಡು ರತ್ನಳನ್ನು ನೋಡಲು, ಗೋಡಂಬಿಯನ್ನು ಕೊಲ್ಲಲು ಶಿವು ಮನೆಗೆ ಬರುತ್ತಾನೆ. ಆದರೆ ಈ ಬಾರಿಯೂ ಅವನ ಪ್ರಯತ್ನ ವಿಫಲವಾಗುತ್ತದೆ. ಮತ್ತೊಂದೆಡೆ, ಇಷ್ಟು ದಿನಗಳು ಲೀಲಾ ತನ್ನ ಸೊಸೆ ರಶ್ಮಿಗೆ ನೀಡುತ್ತಿದ್ದ ಹಿಂಸೆ ಮಾದಪ್ಪಣ್ಣನ ಮುಂದೆ ಬಯಲಾಗಿದೆ. ಸಿಟ್ಟಿನಿಂದ ಹೆಂಡತಿಯನ್ನು ಕೊಲ್ಲಲು ಹೊರಟ ಅವನಿಗೆ ಸ್ವಾಮೀಜಿಯೊಬ್ಬರು ತಿಳಿ ಹೇಳುತ್ತಾರೆ. ಪಾರ್ವತಿ ಹಾಗೂ ಶಿವು ಇಬ್ಬರೂ ಘಟಿಕೋತ್ಸವ ಸಮಾರಂಭಕ್ಕೆ ಬರುತ್ತಾರೆ.

ಪಾರ್ವತಿ ಘಟಿಕೋತ್ಸವಕ್ಕೆ ಬರುವ ಮುನ್ನ ಅವಳ ಸಹಪಾಠಿಗಳು ಕಾಲೇಜಿನ ಬಳಿ ಬಂದಿರುತ್ತಾರೆ. ನಾವೆಲ್ಲಾ ಬಂದಿದ್ದೇವೆ, ನಮ್ಮ ಕಾಲೇಜಿನ ಟಾಪರ್‌ ಇನ್ನೂ ಏಕೆ ಬಂದಿಲ್ಲ ಎಂದು ಒಬ್ಬಾಕೆ ಕೇಳುತ್ತಾಳೆ. ಅವಳು ಓದುವಾಗ ಮಾತ್ರ ಟಾಪರ್‌, ಈಗ ಮದುವೆ ಆಗಿ ಪಾಪರ್‌ ಆಗಿದ್ದಾಳೆ ಎಂದು ಮತ್ತೊಬ್ಬಳು ವ್ಯಂಗ...