Bengaluru, ಏಪ್ರಿಲ್ 8 -- Annayya Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 170ನೇ ಎಪಿಸೋಡ್‌ ಕಥೆ ಹೀಗಿದೆ. ಪೊಲೀಸರು ಶಿವುನನ್ನು ಕೊಂದರೆ ಯಾರಿಗೂ ಗೊತ್ತಾಗುವುದಿಲ್ಲ, ನಮ್ಮ ಕೆಲಸ ಸುಲಭವಾಗುತ್ತದೆ ಎಂದು ನಾಗೇಗೌಡ, ಪೊಲೀಸರ ಜೊತೆ ಸೇರಿ ಶಿವು ಕಥೆ ಮುಗಿಸಲು ಪ್ಲ್ಯಾನ್‌ ಮಾಡುತ್ತಾನೆ. ಜೊತೆಗೆ ವೀರಭದ್ರ ಕೂಡಾ ಸೇರುತ್ತಾನೆ. ತಾವು ಅಂದುಕೊಂಡಂತೆ ಪಾರ್ವತಿಯನ್ನು ಕಳ್ಳತನದ ಕೇಸ್‌ನಲ್ಲಿ ಸೆಲ್‌ ಒಳಗೆ ಹಾಕುತ್ತಾರೆ. ಅವಳನ್ನು ಹುಡುಕಿ ಬಂದ ಶಿವುನನ್ನು ನಾಗೇಗೌಡನ ಕಡೆಯ ವ್ಯಕ್ತಿ ಕೆಣಕುತ್ತಾನೆ.

ನಿನ್ನ ಹೆಂಡತಿ ಬಹಳ ಚೆನ್ನಾಗಿದ್ದಾಳೆ ಎಂದ ನಾಗೇಗೌಡನ ಕಡೆಯವನು ಹೇಳುತ್ತಾನೆ. ಅದಕ್ಕೆ ಕೋಪಗೊಳ್ಳುವ ಶಿವು ಅವನಿಗೆ ಗೂಸಾ ನೀಡುತ್ತಾನೆ. ಇದೇ ಸರಿಯಾದ ಸಮಯ ಎಂದು ಸೋಮೇಗೌಡ, ಮುಖ ಕಾಣದಂತೆ ಟೋಪಿ ಧರಿಸಿ ಶಿವುಗೆ ದೊಣ್ಣೆಯಿಂದ ಹಿಂಬದಿಯಿಂದ ಹೊಡೆಯುತ್ತಾನೆ. ನೋವಿಗೆ ಶಿವು ಪ್ರಜ್ಞೆ ತಪ್ಪಿ ಬೀಳುತ್ತಾನೆ. ಇನ್ಸ್‌ಪೆಕ್ಟರ್‌ ಕೂಡಾ ಬಂದೂಕಿನಿಂದ ಶ...