Bengaluru, ಮೇ 10 -- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿ ಶುಕ್ರವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 195ನೇ ಎಪಿಸೋಡ್‌ ಕಥೆ ಹೀಗಿದೆ. ಆಸ್ಪತ್ರೆಯಲ್ಲಿ ಪಾರ್ವತಿಯನ್ನು ಡಾಕ್ಟರ್‌ ಹೊಗಳಿದ್ದಕ್ಕೆ ಖುಷಿಯಾಗುವ ಶಿವು, ಅವಳನ್ನು ಕೆಲಸಕ್ಕೆ ಹೋಗುವಂತೆ ಹೇಳುತ್ತಾನೆ. ಆದರೆ ಪಾರ್ವತಿ ಕೆಲಸಕ್ಕೆ ಹೋಗಲು ನಿರಾಕರಿಸುತ್ತಾಳೆ. ನಾನು ಯಾವುದೋ ಆಸ್ಪತ್ರೆಗೆ ಕೆಲಸಕ್ಕೂ ಹೋಗಿ, ಮನೆಯನ್ನೂ ನಿಭಾಯಿಸುವುದು ಕಷ್ಟ ಎನ್ನುತ್ತಾಳೆ. ಹಾಗಾದರೆ ನಿನಗೊಂದು ಆಸ್ಪತ್ರೆ ಕಟ್ಟಿಸಿಕೊಡುತ್ತೇನೆ ಎಂದು ಶಿವಣ್ಣ ಹೇಳುತ್ತಾನೆ. ಅದೆಲ್ಲಾ ಆಗದ ಮಾತು ಎಂದು ಪಾರ್ವತಿ ಹೇಳುತ್ತಾಳೆ.

ಆಸ್ಪತ್ರೆ ಕಟ್ಟಿಸುವುದು ಸುಲಭದ ಮಾತಲ್ಲ, ಅದಕ್ಕೆ ಬಹಳ ಉಪಕರಣಗಳು ಬೇಕು. ನನಗೆ ಲೈಸನ್ಸ್‌ ದೊರೆಯಬೇಕು. ಆಗಷ್ಟೇ ನಾನು ಆಸ್ಪತ್ರೆ ಶುರು ಮಾಡಬಹುದು. ಇದಕ್ಕೆಲ್ಲಾ ಬಹಳ ಹಣ ಬೇಕು ಎಂದು ಪಾರು ಹೇಳುತ್ತಾಳೆ. ಲೈಸನ್ಸ್‌ ಯಾರು ಕೊಡುತ್ತಾರೆ? ಅವರ ನಂಬರ್‌ ಕೊಡಿ ಮಾತನಾಡೋಣ ಎಂದು ಗೊರಕೆ ಹೇಳುತ್ತಾನೆ. ಅದೆಲ್ಲಾ ಫೋನ್‌ನಲ್ಲಿ ಮಾತನಾಡುವಂಥ...