Bengaluru, ಏಪ್ರಿಲ್ 20 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯಳಿಗೆ ಒಂದು ಕಷ್ಟ ಮುಗಿಯಿತು ಎನ್ನುವಾಗ ಇನ್ನೊಂದು ಕಷ್ಟ ಆರಂಭವಾಗುತ್ತಿದೆ. ಭಾಗ್ಯಳನ್ನು ಹೇಗಾದರೂ ಮಾಡಿ ಸೋಲಿಸಬೇಕು ಮತ್ತು ಅವಳು ಜೀವನದಲ್ಲಿ ಉದ್ದಾರ ಆಗಬಾರದು ಎಂದು ಬಯಸುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಆಕೆ ಮಾತ್ರ ಎಲ್ಲವನ್ನೂ ಎದುರಿಸಿ, ಧೈರ್ಯದಿಂದ ಮುನ್ನುಗ್ಗುತ್ತಿದ್ದಾಳೆ. ಒಂದೆಡೆ ತಾಂಡವ್ ಮತ್ತು ಶ್ರೇಷ್ಠಾ ಭಾಗ್ಯಳ ಜೀವನಕ್ಕೆ ಕಲ್ಲು ಹಾಕಲು ಯತ್ನಿಸುತ್ತಿದ್ದರೆ, ಮತ್ತೊಂದೆಡೆ ಕನ್ನಿಕಾ ಕೂಡ ಸಾಧ್ಯವಾದಷ್ಟು ಕಿರುಕುಳ ಕೊಡುತ್ತಿದ್ದಾಳೆ. ಇನ್ನೊಂದೆಡೆ ಮನೆಯಲ್ಲಿ ಕೂಡ ಅವಳು ಮನೆ ಕೆಲಸ, ಮಕ್ಕಳ ಶಾಲೆ, ಮನೆ ಇಎಂಐ, ಕಾರಿನ ಇಎಂಐ ಅದು ಇದು ಮತ್ತೊಂದು ಎಂದು ಎಲ್ಲವನ್ನೂ ನಿಭಾಯಿಸಬೇಕಿದೆ. ಆದರೂ ಭಾಗ್ಯ ಎದೆಗುಂದಿಲ್ಲ.

ಹಾಗೆಯೇ, ಮತ್ತೊಂದೆಡೆ ಭಾಗ್ಯ ನಡೆಸುತ್ತಿದ್ದ ಫುಡ್ ಬಿಜಿನೆಸ್‌ಗೆ ತೊಂದರೆ ಮಾಡಲು ಕನ್ನಿಕಾ ಸಂಚು ರೂಪಿಸಿದ್ದಳು. ಅದಕ್ಕೆ ತಾಂಡವ್ ಮತ್ತು ಶ್ರೇಷ್ಠಾ ಸೇರಿಕೊಂಡು ಕುಮ್ಮಕ್ಕು ನೀಡಿದ್ದರು. ಆ...