ಭಾರತ, ಮಾರ್ಚ್ 22 -- ಅಡುಗೆ ಮಾಡಿದ ಬಳಿಕ ಪಾತ್ರೆಗಳನ್ನು ತೊಳೆಯಲೇಬೇಕು. ಆದರೆ, ಕೆಲವೊಮ್ಮೆ ಅಡುಗೆ ಮಾಡುವಾಗ ಪಾತ್ರೆ ಕಪ್ಪಾಗುತ್ತದೆ. ಆಹಾರ ಹೆಚ್ಚು ಬೆಂದರೂ ಪಾತ್ರೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಅಥವಾ ಸುಟ್ಟು ಹೋಗುತ್ತದೆ. ಇದನ್ನು ಸ್ವಚ್ಛಗೊಳಿಸುವುದು ಸ್ವಲ್ಪ ಕಷ್ಟ. ಬ್ರಷ್‌ನಿಂದ ಎಷ್ಟೇ ಉಜ್ಜಿದರೂ ಕಲೆ ಹೋಗುವುದಿಲ್ಲ. ಹೀಗಾಗಿ ಕೆಲವರು ಅದನ್ನು ಎರಡು ಮೂರು ದಿನಗಳವರೆಗೆ ನೀರಿನಲ್ಲಿ ಬಿಡುತ್ತಾರೆ. ಇಲ್ಲಿ ನೀಡಿರುವ ಸಣ್ಣ ಸಲಹೆಗಳೊಂದಿಗೆ ನಿಮಿಷಗಳಲ್ಲಿ ಪಾತ್ರೆಯನ್ನು ಸ್ವಚ್ಛಗೊಳಿಸಬಹುದು.

ವಿನೆಗರ್ ಬಳಸಬಹುದು: ಕಡಾಯಿ ಕಪ್ಪಗಾದಾಗ ಅಡುಗೆ ಸೋಡಾ ಮತ್ತು ವಿನೆಗರ್ ಬಳಸಿ ಸ್ವಚ್ಛಗೊಳಿಸಬಹುದು. ಒಂದು ಸಣ್ಣ ಲೋಟ ನೀರು ತೆಗೆದುಕೊಂಡು ಅದಕ್ಕೆ ವಿನೆಗರ್ ಸೇರಿಸಿ. ಈಗ ಸುಟ್ಟುಹೋದ ಪ್ಯಾನ್ ಅನ್ನು ಒಲೆಯ ಮೇಲೆ ಇರಿಸಿ ಅದಕ್ಕೆ ವಿನೆಗರ್ ಬೆರೆಸಿದ ನೀರನ್ನು ಹಾಕಿ. ಕಡಿಮೆ ಉರಿಯಲ್ಲಿ ಇದನ್ನು ಬಿಸಿ ಮಾಡಿ. ಅದೇ ಪ್ಯಾನ್‌ಗೆ ಎರಡು ಚಮಚ ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಬೆರೆಸಿ. ಇದು ಚೆನ್ನಾಗಿ ಕುದಿಯಲು ಪ್ರಾರಂಭಿಸಿದ ನ...