ಭಾರತ, ಮೇ 6 -- ಭಾರತೀಯ ಅಡುಗೆಮನೆಯಲ್ಲಿ ಈರುಳ್ಳಿಗೆ ವಿಶೇಷ ಸ್ಥಾನವಿದೆ. ಬಹುತೇಕ ಅಡುಗೆಗೆ ಈರುಳ್ಳಿ ಬೇಕೇ ಬೇಕು. ಸಾರು, ಸಾಂಬಾರ್‌ಗಂತೂ ಈರುಳ್ಳಿ ಇಲ್ಲದೇ ರುಚಿಯೇ ಬರುವುದಿಲ್ಲ. ಈರುಳ್ಳಿ ಸೇರಿಸಿದ ಅಡುಗೆ ಖಾದ್ಯಗಳ ರುಚಿ ನಿಜಕ್ಕೂ ಅದ್ಭುತ. ನೀವು ಅಡುಗೆಗೆ ಪ್ರತಿದಿನ ಈರುಳ್ಳಿ ಬಳಸುವವರಾದರೆ ಈ ಕೆಲವು ಸಲಹೆಗಳು ನಿಮಗೆ ತಿಳಿದಿರಬೇಕು. ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬಾರದೇ ಇರುವುದರಿಂದ ಈರುಳ್ಳಿ ಸರಿಯಾಗಿ ಬೇಯಿಸುವ ಕ್ರಮದವರೆಗೆ ಅಡುಗೆ ಮಾಡುವ ಪ್ರತಿಯೊಬ್ಬರು ತಿಳಿದಿರಬೇಕಾದ ಈರುಳ್ಳಿಗೆ ಸಂಬಂಧಿಸಿದ ಕಿಚನ್ ಹ್ಯಾಕ್‌ಗಳಿವು.

ಈರುಳ್ಳಿ ಕತ್ತರಿಸುವ ಕೆಲಸ ನಿಜಕ್ಕೂ ಕಷ್ಟಕರ. ಯಾಕೆಂದರೆ ಈರುಳ್ಳಿ ಕಟ್ ಮಾಡುವಾಗ ಬೇಡ ಎಂದರೂ ಕಣ್ಣೀರು ಸುರಿಯುತ್ತದೆ. ಆ ಕಾರಣಕ್ಕೆ ಹಲವರು ಈರುಳ್ಳಿ ಕತ್ತರಿಸುವ ಕೆಲಸ ಎಂದರೆ ಹಿಂದೇಟು ಹಾಕುತ್ತಾರೆ. ಆದರೆ ಕಣ್ಣೀರು ಬಾರದಂತೆ ಮಾಡಲು ಒಂದು ಟ್ರಿಕ್ಸ್ ಇದೆ. ಈರುಳ್ಳಿ ಕತ್ತರಿಸುವ ಮುನ್ನ 15 ನಿಮಿಷಗಳ ಕಾಲ ಅದನ್ನು ಫ್ರಿಜ್‌ನಲ್ಲಿಡಿ ಅಥವಾ ನೀರಿನಲ್ಲಿ ನೆನೆಸಿಡಿ. ನಂತರ ಕಟ್ ಮಾಡಿ,...