Bengaluru, ಏಪ್ರಿಲ್ 19 -- ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ಬೆನ್ನು ನೋವಿನಿಂದ ಬಳಲುವುದು ಸರ್ವೇಸಾಮಾನ್ಯ. ಇದರ ಮಧ್ಯೆ ಧೀರ್ಘಕಾಲ ನಿಂತು ಅಡುಗೆ ಮಾಡುವುದು, ಪಾತ್ರೆ ತೊಳೆಯುವುದನ್ನು ಮಾಡುತ್ತಿದ್ದರೆ ನೋವು ಹಿಮ್ಮಡಿಯಾಗುತ್ತದೆ. ಬೆನ್ನು ನೋವಿನಿಂದಾಗಿ ಸೊಂಟನೋವು ಉಂಟಾಗುತ್ತದೆ. ಈ ನೋವನ್ನು ಶಮನಗೊಳಿಸಲು ನಿಮ್ಮ ದೇಹದ ಭಂಗಿಯೇ ಸಹಾಯ ಮಾಡುತ್ತದೆ ಎಂದರೆ ನೀವು ನಂಬುತ್ತೀರಾ? ಸರಿಯಾಗಿ ನಿಂತು ಅಡುಗೆ ಮನೆ ಕೆಲಸಗಳನ್ನು ಮಾಡಿದರೆ ಬೆನ್ನು ನೋವು ಹೇಗೆ ಮಾಯವಾಗುತ್ತದೆ ಎಂಬುದರ ಕುರಿತು ಇಲ್ಲಿ ಮಾಹಿತಿಯಿದೆ.

ಅಡುಗೆಮನೆ ಕೆಲಸದಿಂದ ಬೆನ್ನು ನೋವು ಉಂಟಾಗುತ್ತದೆ: ಅನೇಕ ಮಹಿಳೆಯರು ಧೀರ್ಘಕಾಲದವರೆಗೆ ನಿಂತುಕೊಂಡೆ ಅಡುಗೆ ಮನೆಯ ಕೆಲಸಗಳನ್ನು ಮಾಡುವುದರಿಂದಲೇ ಈ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಮುಖ್ಯ ಕಾರಣ ಸರಿಯಾದ ಭಂಗಿಯಲ್ಲಿ ನಿಂತು ಕೆಲಸ ಮಾಡದಿರುವುದು. ಚಪಾತಿ ಮಾಡುವಾಗ, ಪಾತ್ರೆ ತೊಳೆಯುವಾಗ ಹೆಚ್ಚು ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಏಕೆಂದರೆ, ಈ ಸಮಯದಲ್ಲಿ ನಿಮ್ಮ ಗಮನ ಕೆಲಸದ ಮೇಲೆ ಇರುತ್ತದೆ...